ಅಬಿಜಿತ್ ರೈ 
ಜಿಲ್ಲೆ

ರ‍್ಯಾಲಿ ಆಫ್ ಚಿಕ್ಕಮಗಳೂರು ಮೇ ೪, ೫ಕ್ಕೆ

ಚಿಕ್ಕಮಗಳೂರು: ದಿ ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ನಿಂದ ಮೇ ೪ ಮತ್ತು ೫ ರಂದು ರ‍್ಯಾಲಿ ಆಫ್ ಚಿಕ್ಕಮಗಳೂರು ಹೆಸರಿನಲ್ಲಿ ದ್ವಿಚಕ್ರ ವಾಹನ ರ‍್ಯಾಲಿ ಆಯೋಜಿಲಾಗಿದೆ ಎಂದು ಕ್ಲಬ್ ಕಾರ್ಯದರ್ಶಿ ಅಭಿಜಿತ್‌ಪೈ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದು ೨ನೇ ಸುತ್ತಿನ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಸ್ಪರ್ಧೆಯಾಗಿದೆ. ಎಂಆರ್‌ಎಫ್ ಟೈಯರ್ಸ್. ಟಿವಿಎಸ್, ಅಪಾಚಿ, ಮಾನ್‌ಸ್ಟರ್ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ರ‍್ಯಾಲಿ ನಡೆಯುತ್ತಿದ್ದು, ನಡೆಯುತ್ತಿದ್ದು ವ್ಯಾಮ್ಸಿ ಮರ‍್ಲಾ ಸ್ಪೋರ್ಟ್ಸ್ ಫೌಂಡೇಷನ್ ಸಹ ಪ್ರಾಯೋಜಕರಾಗಿದ್ದಾರೆ ಎಂದು ಹೇಳಿದರು.ರ‍್ಯಾಲಿ ಮೇ೪ ರಂದು ಸಂಜೆ ೪.೩೦ಕ್ಕೆ ನಗರಕ್ಕೆ ಸಮೀಪದ ಅಲ್ಲಂಪುರದಲ್ಲಿರುವ ಸೆವೆನ್ ಇವೆನ್ ರೆಸಾರ್ಟ್ನಲ್ಲಿ ವಿದ್ಯುಕ್ತವಾಗಿ ಆರಂಭವಾಗಲಿದೆ. ವಸಂತಕೂಲ್ ಎಸ್ಟೇಟ್, ಸಾನೆಹಡ್ಲು, ಪಾಳ್ಯ ಎಸ್ಟೇಟ್‌ನಲ್ಲಿ ೩ ಬಾರಿ ೯ ಹಂತಗಳಲ್ಲಿ ರ‍್ಯಾಲಿ ನಡೆಯಲಿದೆ. ಒಟ್ಟು ರ‍್ಯಾಲಿ ೧೪೦ ಕಿ.ಮೀ ವ್ಯಾಪ್ತಿಯಲ್ಲಿ ನಡೆಯಲಿದೆ. ಭಾನುವಾರ ಬೆಳಗ್ಗೆ ೭ ಗಂಟೆಗೆ ರ‍್ಯಾಲಿ ಆರಂಭವಾಗಿ ಸಂಜೆ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.ರ‍್ಯಾಲಿಯಲ್ಲಿ ವಿವಿಧ ಮಾದರಿಯ ಬೈಕ್‌ಗಳು, ಸ್ಕೂಟರ್‌ಗಳು, ಪ್ರತ್ಯೇಕ ವಿಭಾಗಗಳ ವ್ಯವಸ್ಥೆ ಮಾಡಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ರ‍್ಯಾಲಿ ನಡೆಯಲಿದ್ದು ೩ ವಿಭಾಗಗಳನ್ನು ನಿಗಧಿಪಡಿಸಲಾಗಿದೆ ಎಂದರು.
ರಾಷ್ಟಿçÃಯ ಸ್ಪರ್ಧೆಗಳಿಗೆ ಹಾಗೂ ಕರ್ನಾಟಕ ಸ್ಪರ್ಧಿಗಳು ಮತ್ತು ಜಿಲ್ಲೆಯ ಸ್ಪರ್ಧಿಗಳನ್ನು ಪ್ರೋತ್ಸಾಹಿಸಲು ಚಿಕ್ಕಮಗಳೂರು ಚಾಂಪಿಯನ್ಸ್ ಎಂಬ ೩ ವಿಭಾಗಗಳನ್ನು ಪ್ರಾರಂಭಿಸಲಾಗಿದೆ. ಪ್ರತಿ ವಿಭಾಗಕ್ಕೆ ೩ ಬಹುಮಾನ ನೀಡಲಾಗುತ್ತಿದೆ. ಮೊದಲ ಬಹುಮಾನ ೯,೯೯೯ ರೂ, ದ್ವಿತೀಯ ೭,೫೦೦ ರೂ ಹಾಗೂ ತೃತೀಯ ಬಹುಮಾನ ೫,೦೦೦ ರೂ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.ರ‍್ಯಾಲಿಯಲ್ಲಿ ಭಾಗವಹಿಸಲು ರಾಷ್ಟಿçÃಯ ಚಾಂಪಿಯನ್‌ಶಿಪ್‌ಗೆ ೫,೯೦೦ ರೂ ಸ್ಥಳೀಯ ಮತ್ತು ಕರ್ನಾಟಕ ಚಾಂಪಿಯನ್‌ಶಿಪ್‌ಗೆ ೨,೯೦೦ ರೂ ಪ್ರವೇಶ ಶುಲ್ಕ ನಿಗಧಿ ಪಡಿಸಿಸಲಾಗಿದೆ. ಒಟ್ಟು ೯೫ ರಿಂದ ೧೦೦ ಮಂದಿ ಸ್ಪರ್ಧಿಸುವ ನಿರೀಕ್ಷೆಯಿದೆ. ಈಗಾಗಲೇ ೮೮ ಮಂದಿ ಪುರುಷರು, ೯ ಮಂದಿ ಮಹಿಳೆಯರು ಖಚಿತಪಡಿಸಿ ನೊಂದಾಯಿಸಿಕೊAಡಿದ್ದಾರೆ. ರಾಷ್ಟಿçÃಯ ಸ್ಪರ್ಧೆಯಲ್ಲಿ ವಿಜೇತರಾದವರು ೨.೦೫ ಲಕ್ಷ ರೂ. ಬಹುಮಾನ ಗೆಲ್ಲಲಿದ್ದಾರೆ ಎಂದು ಮಾಹಿತಿ ನೀಡಿದರು.
ಪುರುಷ ವಿಭಾಗದಲ್ಲಿ ರಾಜೇಂದ್ರ ಆರ್.ಈ, ನಟರಾಜ್, ಆರ್.ಯುವರಾಜ್ ಮುಂತಾದವರು ಭಾಗವಹಿಸಲಿದ್ದಾರೆ. ಅದೇ ರೀತಿ ಮಹಿಳಾ ವಿಭಾಗದಲ್ಲಿ ಐಶ್ವರ್ಯ ಪಿಚೈ, ತನಿಕ ಶಾನುಬೋಗ್, ಸೌಮ್ಯ ಚೌಧರಿ, ಇಷಿತಾ ಗುಪ್ತಾ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಮುಖ್ಯಸ್ಥರಾದ ಜಯಂತ್ ಪೈ, ದಿಲೀಪ್, ಸಮೃದ್ ಪೈ, ಪ್ರಜ್ವಲ್ ಮತ್ತಿತರರಿದ್ದರು.