ಮೈಸೂರು: ಮೈಸೂರು ದಸರಾ ವಿಂಟೇಜ್ ಮತ್ತು ಕ್ಲಾಸಿಕ್ ಕಾರ್ ರ‌್ಯಾಲಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿ, ವಿಂಟೇಜ್ ಕಾರಿನ ಮುಂದೆ ಫೋಟೊ ಕ್ಲಿಕ್ಕಿಸಿಕೊಂಡರು.
ಇಷ್ಟೊಂದು ಬಗೆಯ ವಿಂಟೇಜ್ ಕಾರುಗಳನ್ನು ನಾವು ಹೊಂದಿರುವುದು ವಿಶೇಷವಾಗಿದೆ. ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ ನಾನಾ ದೇಶಗಳಲ್ಲಿ ತಯಾರಾದ ತರೇಹವಾರಿ ಕಾರುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, 80 ರಿಂದ 100 ವರ್ಷಗಳ ಹಳೆಯ ಕಾರುಗಳ ನಿರ್ವಹಣೆ ಮಾಡುವುದು ಸುಲಭದ ಕೆಲಸವಲ್ಲ. ಕಾರುಪ್ರಿಯರು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ ಎಂದರು.
ಪತ್ರಿಕೋದ್ಯಮಿ ವಿಕ್ರಂ ಮುತ್ತಣ್ಣ, ಉದ್ಯಮಿಗಳಾದ ಗೋಪಿನಾಥ್ ಶೆಣೈ, ಸಾವಿತ್ರಿ, ಭವ್ಯ ಪೈ ಸಂದೀಪ್ ನಾಯಕ್, ಆಲಯಿನ್, ಮಾಧವ ಶೆಣೈ, ಗಿರಿಧರ್ ಭಟ್, ಬಾಲಚಂದ್ರ ಇತರರು ಇದ್ದರು.