ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಕನ್ನಡ ರಥ ಯಾತ್ರೆಗೆ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಚಾಲನೆ ನೀಡಿದರು. ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಎಂ. ರಮೇಶ ಕಮತಗಿ, ರಮೇಶ ಬದ್ನೂರ, ಅಶೋಕ ಕಂದಗಲ್, ಉಮೇಶ ತಿಮ್ಮಾಪುರ, ರಮೇಶ ಹೂಗಾರ, ಎಸ್. ಜಿ. ತೇಲಿ, ಪರಶುರಾಮ ನಾಲವದೇ, ಕುಮಾರ ಕನಕೇರಿ, ಗಣೇಶ ಹಣಗಿ ಇದ್ದರು. 
ಜಿಲ್ಲೆ

ಮೇಘಮೈತ್ರಿ ಕನ್ನಡ ರಥ ಯಾತ್ರೆಗೆ ರಕ್ಷಿತಾ ಈಟಿ ಚಾಲನೆ

ಬಾಗಲಕೋಟೆ: ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಜ.6 ಮತ್ತು 7 ರಂದು ಬಾದಾಮಿಯ ಎಸ್. ಎಫ್. ಹೊಸಗೌಡ್ರ ವರ್ಲ್ಡ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿರುವ ಬಾದಾಮಿ ಚಾಲುಕ್ಯ ಉತ್ಸವ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ರಥ ಯಾತ್ರೆಗೆ ಆರಂಭಗೊಂಡಿತು.

ನಗರದ ಬಸವೇಶ್ವರ ವೃತ್ತದಲ್ಲಿ ಯಾತ್ರೆಗೆ ಚಾಲನೆ ನೀಡಿ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಮಾತನಾಡಿ, ಕನ್ನಡ-ನಾಡು ಬಗ್ಗೆ ಯುವಕರಲ್ಲಿ ಜ್ಞಾನ ಹೆಚ್ಚಿಸಬೇಕು. ನೆಲ, ಜಲ, ಭಾಷೆ ವಿಷಯ ಬಂದಾಗ ಎಲ್ಲರೂ ಒಟ್ಟಾಗಿ ಹೋರಾಡುವ ಮನೋಭಾವ ಹೊಂದಬೇಕು. ಕನ್ನಡಕ್ಕಾಗಿ ನಾವೆಲ್ಲ ಪ್ರತಿ ಕ್ಷಣವೂ ಶ್ರಮಿಸಬೇಕು ಎಂದು ಹೇಳಿದರು.

ಕನ್ನಡಪರ ಹೋರಾಟಗಾರ ರಮೇಶ ಬದ್ನೂರ್ ಮಾತನಾಡಿ, ಕನ್ನಡ ಕಟ್ಟುವ ಕಾಯಕದಲ್ಲಿ ನಾವೆಲ್ಲರೂ ಜೊತೆಯಾಗೋಣ ಎಂದರು.

ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಎಂ. ರಮೇಶ ಕಮತಗಿ ಮಾತನಾಡಿ, ಮೇಘಮೈತ್ರಿ ರಥಯಾತ್ರೆ ಬಾಗಲಕೋಟೆಯಿಂದ ಹೊರಟು ಶಿರೂರ ಮಾರ್ಗವಾಗಿ ಕಮತಗಿ, ಅಮೀನಗಡ, ಹುನಗುಂದ, ಇಳಕಲ್ಲ, ಗುಡೂರು, ಐಹೊಳೆ, ಪಟ್ಟದಕಲ್ಲು, ಗುಳೇದಗುಡ್ಡ, ಕೆರೂರು ಮಾರ್ಗವಾಗಿ ಬಾದಾಮಿ ತಲುಪಲಿದೆ. ಉತ್ಸವದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಅಶೋಕ ಕಂದಗಲ್, ಉಮೇಶ ತಿಮ್ಮಾಪುರ, ರಮೇಶ ಹೂಗಾರ, ಎಸ್. ಜಿ. ತೇಲಿ, ಪರಶುರಾಮ ನಾಲವದೇ, ಕುಮಾರ ಕನಕೇರಿ, ಗಣೇಶ ಹಣಗಿ, ರಾಜೇಶ್ ಗುಳಬಾಳ ಹಾಗೂ ಸಕ್ರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.