ಜಿಲ್ಲೆ

ಮೈಸೂರಿನಲ್ಲಿ ಪೊಲೀಸರಿಗೆ ರಕ್ಷೆ ಕಟ್ಟಿ ರಕ್ಷಾಬಂಧನ ಆಚರಣೆ

Mysuru

ಮೈಸೂರು: ರಕ್ಷಾ ಬಂಧನ ಕೇವಲ ಸಹೋದರಿಯನ್ನು ರಕ್ಷಿಸಲು ಮಾತ್ರ ಸೀಮಿತವಾಗದೆ ದೇಶ, ಮಾತೃಭೂಮಿ, ಪರಿಸರ, ಜಲವನ್ನು ಸಂರಕ್ಷಿಸುವ ಅಸ್ತ್ರವಾಗಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಹೇಮಾ ನಂದೀಶ್ ಹೇಳಿದರು.

ಬಿಜೆಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಗುರುವಾರ ನಗರದ ಲಲಿತಮಹಲ್ ರಸ್ತೆಯ ಕೆಎಸ್‌ಆರ್‌ಪಿ ಕವಾಯತು ಮೈದಾನ ದಲ್ಲಿ ಹಮ್ಮಿಕೊಂಡ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಣ್ಣ ತಂಗಿಯರ ಹಬ್ಬ ಎಂದರೆ ಅದು ರಾಖಿ ಹಬ್ಬ. ರಾಖಿಯನ್ನು ಕಟ್ಟಿದ ಸಹೋದರಿಯರಿಗೆ ಅಣ್ಣಂದಿರು ಸದಾ ರಕ್ಷಣೆ ನೀಡಬೇಕು. ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಹಬ್ಬಗಳಿಗೂ ವಿಶೇಷ ಹಿನ್ನೆಲೆ ಹಾಗೂ ಅರ್ಥವಿದೆ. ರಕ್ಷಾ ಬಂಧನ ಸಹೋದರತೆ ಸಂದೇಶ ಸಾರುವ ಹಬ್ಬವಾಗಿದೆ ಎಂದು ಹೇಳಿದರು.

ಬಿಜೆಪಿ ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇಣುಕಾ ರಾಜ್, ನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀ ಕಿರಣ್ ಗೌಡ ,ಪ್ರಮೀಳಾ ಭರತ್, ಮಾಜಿ ಸದಸ್ಯೆ ಆಶಾ ಲಕ್ಷ್ಮೀನಾರಾಯಣ್, ಚಾಮರಾಜ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಮಹೇಶ್, ನರಸಿಂಹರಾಜ ಕ್ಷೇತ್ರದ ಅಧ್ಯಕ್ಷೆ ಮಮತಾ ಚಂದ್ರಶೇಖರ್, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷೆ ಗೀತಾ ಮಹೇಶ್, ಚಾಮುಂಡೇಶ್ವರಿ ಮಂಡಲದ ಅಧ್ಯಕ್ಷೆ ಜ್ಯೋತಿ ರವಿಕುಮಾರ್ ಹಾಗೂ ಇತರರು ಇದ್ದರು.