ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆ ನರ್ಸರಿ ವಿಭಾಗದ ವಿದ್ಯಾರ್ಥಿಗಳು ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ರಕ್ಷೆ ಕಟ್ಟಿದರು. ಡಾ.ತುಷಾರ ಕುಮಾರಿ, ಮುಖ್ಯಶಿಕ್ಷಕ ಚಂದ್ರಶೇಖರ ಶೇಟ್ ಮೊದಲಾದವರಿದ್ದರು. 
ಜಿಲ್ಲೆ

ಶ್ರೀರಾಮ ವಿದ್ಯಾಸಂಸ್ಥೆ ಮಕ್ಕಳಿಂದ ರಕ್ಷಾಬಂಧನ

ಸೌಮ್ಯ ಆರ್

ಕೊಕ್ಕಡ: ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆ ನರ್ಸರಿ ವಿಭಾಗದ ವಿದ್ಯಾರ್ಥಿಗಳು ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿಗೆ ರಕ್ಷೆ ಕಟ್ಟುವ ಮೂಲಕ ವಿಭಿನ್ನವಾಗಿ ರಕ್ಷಾ ಬಂಧನ ಆಚರಿಸಿದರು.

ವಿದ್ಯಾರ್ಥಿಗಳಿಗೆ ಹೊರ ಸಂಚಾರ ಪಾಠದ ಒಂದು ಭಾಗವಾಗಿದ್ದು, ಸಮುದಾಯದ ಸಹಭಾಗಿತ್ವ ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮುಖ್ಯಶಿಕ್ಷಕ ಚಂದ್ರಶೇಖರ ಶೇಟ್ ಮಾತನಾಡಿ, ರಕ್ಷಾಬಂಧನದ ಶುಭದಿನದಂದು ರಕ್ಷೆ ಕಟ್ಟುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಇನ್ನಷ್ಟು ಶಕ್ತಿ ಸಿಗುವಂತಾಗಲಿ ಎಂದರು.

ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ, ದಂತ ವೈದ್ಯಾಧಿಕಾರಿ ಡಾ.ತುಷಾರ ಕುಮಾರಿ ನಿತ್ಯ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಾದ ಆರೋಗ್ಯ ಸಲಹೆ ನೀಡಿದರು. ಶಾಲಾ ನರ್ಸರಿ ವಿಭಾಗದ ಮೇಲ್ವಿಚಾರಕಿ ಸ್ವಾತಿ ಕೆ.ವಿ, ನರ್ಸರಿ ವಿಭಾಗದ ಶಿಕ್ಷಕಿಯರಾದ ಕಾವ್ಯ ಡಿ.ಕೆ, ಅನುಶ್ರೀ ಎಚ್, ದಿಲೀಪ್, ಆಸ್ಪತ್ರೆ ಸಿಬ್ಬಂದಿ ಮತ್ತಿತರರು ಇದ್ದರು.