ಜಿಲ್ಲೆ

ಸರ್ಕಾರಿ ಅಂಧ ಮಕ್ಕಳ ಶಾಲೆಯಲ್ಲಿ ರಕ್ಷಾಬಂಧನ

ಹುಬ್ಬಳ್ಳಿ : ಇಲ್ಲಿನ ಸಕ್ಷಮ ಉತ್ತರ ಕರ್ನಾಟಕ ಪ್ರಾಂತ, ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರ ಮತ್ತು ಕಲ್ಯಾಣಿ ಮಹಿಳಾ ಮಂಡಳಗಳ ಸಂಯುಕ್ತ ಆಶ್ರಯದಲ್ಲಿ ದೃಷ್ಠಿಚೇತನ ವಿದ್ಯಾರ್ಥಿಗಳೊಂದಿಗೆ ರಕ್ಷಾ ಬಂಧನ ಆಚರಣೆಯನ್ನು ಆನಂದ ನಗರದ ಸರ್ಕಾರಿ ಅಂಧ ಮಕ್ಕಳ ಶಾಲೆಯಲ್ಲಿ ಆ. 9ರಂದು ಬೆಳಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿದೆ.

ಶಾಲೆಯ ಅಧೀಕ್ಷಕರಾದ ರಾಜಕುಮಾರ ಸಾಬೋಜಿ ಅಧ್ಯಕ್ಷತೆ ವಹಿಸುವರು. ಸಾಂಸ್ಕೃತಿಕ ಚಿಂತಕ ಸತೀಶ ಶೆಟ್ಟಿ (ಕುಡ್ಲ), ಸಮಕ್ಷಮ ಉತ್ತರ ಕರ್ನಾಟಕ ಪ್ರಾಂತದ ಡಾ. ಸುನೀಲ ಗೋಖಲೆ, ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದ ಅಧ್ಯಕ್ಷೆ ಕಮಲಾ ಗೋವಿಂದ ಜೋಶಿ, ಕಲ್ಯಾಣಿ ಮಹಿಳಾ ಮಂಡಳದ ಅಧ್ಯಕ್ಷೆ ವೈದೇಹಿ ಪುರಾಣಿಕ ಅತಿಥಿಗಳಾಗಿ ಪಾಲ್ಗೊಳ್ಳುವರು.