ಜಮಖಂಡಿ ನಗರದ ಗ್ರಾಮೀಣ ಪೊಲೀಸ್ ಠಾಣೆ ಆವರಣದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಡಿವೈಎಸ್‌ಪಿ ಶಾಂತವೀರ ಈ. ಅವರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು. ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐಗಳಾದ ನಾಗರಾಜ ಖಿಲಾರಿ, ಮಹೇಶ ಸಂಖ ಇತರರಿದ್ದರು. 
ಜಿಲ್ಲೆ

ಸಹೋದರತ್ವದ ಪ್ರತೀಕ ರಕ್ಷಾ ಬಂಧನ

ಜಮಖಂಡಿ: ಅಣ್ಣ-ತಂಗಿಯ ಬಂಧವನ್ನು ಮತ್ತಷ್ಟು ಗಟ್ಟಿಯಾಗಿ ಬೆಸೆಯುವುದೇ ರಕ್ಷಾ ಬಂಧನ. ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಸಹೋದರತ್ವದ ಪ್ರತೀಕವಾಗಿ ಪುರಾತನ ಇತಿಹಾಸವಿದೆ. ಈ ಹಬ್ಬವನ್ನು ಆರಕ್ಷಕ ಕುಟುಂಬ ಸಹೋದರಿಯರೊಂದಿಗೆ ಆಚರಿಸುತ್ತಿರುವುದು ನನ್ನ ಸುದೈವ ಎಂದು ಡಿವೈಎಸ್‌ಪಿ ಶಾಂತವೀರ ಈ. ಹೇಳಿದರು.

ನಗರದ ಗ್ರಾಮೀಣ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು ಜನರಿಗೆ ನೆಮ್ಮದಿಯ ಜೀವನ ನಡೆಸಲು ಹಗಲಿರುಳು ಶ್ರಮಿಸುತ್ತಿರುವ ನಮ್ಮ ಇಲಾಖೆಯ ಸಹೋದರಿಯರು. ಇವರಿಗೆ ನೈತಿಕ ಬೆಂಬಲ ಮತ್ತು ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವುದು ಮುಖ್ಯವಾಗಿದೆ ಎಂದರು.
ಸಿಪಿಐ ಮಲ್ಲಪ್ಪ ಮಡ್ಡಿ ಮಾತನಾಡಿ, ಮಹಾಭಾರತ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಶ್ರೇಷ್ಠವಾದ ಹಬ್ಬ ಇದಾಗಿದೆ ಎಂದರು.
ಪೊಲೀಸ್ ಮಹಿಳಾ ಸಿಬ್ಬಂದಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಬ್ಬಂದಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು.

ನಗರ ಹಾಗೂ ಗ್ರಾಮೀಣ ಠಾಣಾ ಪಿಎಸ್‌ಐಗಳಾದ ನಾಗರಾಜ ಖಿಲಾರಿ, ಮಹೇಶ ಸಂಖ ಇತರರಿದ್ದರು.