ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಲಾಯಿತು. 
ಜಿಲ್ಲೆ

ರಕ್ಷಾ ಬಂಧನ ಬಾಂಧವ್ಯದ ಹಬ್ಬ

ವಿರಾಜಪೇಟೆ: ರಕ್ಷಾಬಂಧನದ ದಿನ ಸಹೋದರಿ ತನ್ನ ಸಹೋದರನ ಕೈಗೆ ರಕ್ಷೆ ಕಟ್ಟಿ ದೀರ್ಘಾಯುಷ್ಯ ಹಾಗೂ ಯಶಸ್ಸನ್ನು ಬಯಸಿದರೆ, ಸಹೋದರ ನನ್ನ ಸಹೋದರಿಯನ್ನು ಎಲ್ಲ ರೀತಿಯ ಕಷ್ಟಗಳಿಂದ ರಕ್ಷಿಸುವ ಭರ

ವಸೆ ನೀಡುವ ಹಬ್ಬ ರಕ್ಷಾಬಂಧನ ಎಂದು ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟೃ್ ಆರ್.ಸಲ್ದಾನ ಅಭಿಪ್ರಾಯಪಟ್ಟರು.

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಕ್ಷಾ ಬಂಧನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಆಚರಿಸುವ ಅತ್ಯಂತ ಮಹತ್ವದ ಹಬ್ಬಗಳಲ್ಲಿ ರಕ್ಷಾಬಂಧನ ಪ್ರಮುಖ ಸ್ಥಾನ ಪಡೆದಿದೆ. ಸಹೋದರ ಸಹೋದರಿಯರ ನಡುವೆ ಬಾಂಧವ್ಯದ ಪ್ರತೀಕವಾಗಿ ಈ ಹಬ್ಬ ಆಚರಿಸಲಾಗುತ್ತದೆ. ಪ್ರೀತಿ, ವಿಶ್ವಾಸ, ಸಹೋದರತೆ ಗುಣಗಳನ್ನು ಬೆಳೆಸಿಕೊಳ್ಳುವಂತೆ ಈ ಹಬ್ಬ ಸಂದೇಶ ನೀಡುತ್ತದೆ. ರಕ್ಷಾ ಬಂಧನ ಜಾತಿ, ಧರ್ಮ, ಭೇದಭಾವ ತೊಡೆದು ಹಾಕಿ ಎಲ್ಲರನ್ನೂ ಒಂದಾಗಿಸಿ ಸಮಾಜದಲ್ಲಿ ಸಾಮರಸ್ಯ ಬೆಳೆಸಲು ಸಹಕಾರಿ ಎಂದರು.

ಕಾಲೇಜಿನ ಉಪನ್ಯಾಸಕಿ ಬಿ.ಯು .ಅಂಬಿಕಾ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಭ್ರಾತೃತ್ವ ಬೆಳೆಸುವ ಶ್ರೇಷ್ಠ ಹಬ್ಬ ಇದಾಗಿದ್ದು, ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬ ಆಚರಿಸಲಾಗುತ್ತದೆ. ಹಬ್ಬದ ಮಹತ್ವದ ಕುರಿತ ಉಲ್ಲೇಖಗಳು ಪುರಾಣ ಹಾಗೂ ಇತಿಹಾಸದ ಪುಟಗಳಲ್ಲಿ ಕಾಣಸಿಗುತ್ತದೆ. ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನ ಕೈಗೆ ಗಾಯವಾದಂತಹ ಸಂದರ್ಭ ದ್ರೌಪದಿಯು ತನ್ನ ಸೀರೆಯ ಸೆರಗನ್ನು ಹರಿದು ಕಟ್ಟಿದಳು. ಮುಂದೆ ಕೌರವರಿಂದ ದ್ರೌಪದಿಗೆ ಅಪಮಾನವಾಗುವ ಸಂದರ್ಭ ಕೃಷ್ಣನು ಅಕ್ಷಯ ಸೀರೆ ಕೊಟ್ಟು ಆಕೆಯನ್ನು ಕಾಪಾಡಿದ. ಅದೇ ರೀತಿ ಇತಿಹಾಸದಲ್ಲಿ ಜಗತ್ತನ್ನೇ ಗೆಲ್ಲುತ್ತ್ತಾ ಬಂದ ಅಲೆಕ್ಸಾಂಡರ್ ಭಾರತೀಯ ಪಂಜಾಬಿನ ರಾಜನಾದ ಪುರುಷೋತ್ತಮ(ಪೊರಸ್)ನಿಂದ ಯುದ್ಧದಲ್ಲಿ ಸೋತು ಸೆರೆಯಾದಗ ಅಲೆಕ್ಸಾಂಡರ್‌ನನ್ನು ಕೊಲ್ಲದೆ ಆತನನ್ನು ರಕ್ಷಿಸುವಂತೆ ಅಲೆಕ್ಸಾಂಡರ್‌ನ ಹೆಂಡತಿ ಪುರುಷೋತ್ತಮನಿಗೆ ರಕ್ಷೆ ಕಟ್ಟಿ ತನ್ನ ಗಂಡನನ್ನು ಉಳಿಸಿಕೊಂಡ ಘಟನೆಗಳನ್ನು ನಾವಿಲ್ಲಿ ಸ್ಮರಿಸಬಹುದು ಎಂದರು.

ಎಲ್ಲ ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿದರು. ಈ ಸಂದರ್ಭ ಕಾಲೇಜಿನ ಸಿಬ್ಬಂದಿ ಪ್ರಿಯ ಮುದ್ದಪ್ಪ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಇದ್ದರು .