ರಾಮನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ರಕ್ಷಾ ಬಂಧನ ಆಚರಿಸಲಾಯಿತು. ಗೌರಿ ಶಂಕರ್, ಸೋಮಶೇಖರ್, ಅನಿಲ್, ಶರವಣ, ಜಿಷ್ಣು ಇದ್ದರು.  
ಜಿಲ್ಲೆ

ಆರ್‌ಎಸ್‌ಎಸ್‌ನಿಂದ ರಕ್ಷಾ ಬಂಧನ ಆಚರಣೆ

ಅಭಿನಯ್ ಎಚ್.ಎಂ

ವಿರಾಜಪೇಟೆ: ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಸೋಮವಾರ ರಕ್ಷಾ ಬಂಧನ ಆಚರಿಸಲಾಯಿತು.

ಆರಂಭದಲ್ಲಿ ಭಗವಾಧ್ವಜಕ್ಕೆ ನಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ದಿನದ ಮಹತ್ವದ ಬಗ್ಗೆ ಸ್ವಯಂ ಸೇವಕರು ಭಾಷಣ ಮಾಡಿದರು. ಧ್ವಜಪ್ರಣಾಮ ಸಲ್ಲಿಸಿದ ನಂತರ ನೆರೆದಿದ್ದ ಸ್ವಯಂ ಸೇವಕರು ಮತ್ತು ಸಾರ್ವಜನಿಕರು ಪರಸ್ಪರ ರಕ್ಷೆ ಕಟ್ಟಿದರು. ಬಳಿಕ ಸಿಹಿ ಹಂಚಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಗೌರಿ ಶಂಕರ್, ಸೋಮಶೇಖರ್, ಅನಿಲ್, ಶರವಣ, ಜಿಷ್ಣು, ಇತರರು ಉಪಸ್ಥಿತರಿದ್ದರು.