ಜಿಲ್ಲೆ

ಸಮಾಜಮುಖಿ ಸೇವೆಗೆ ಆದ್ಯತೆ ನೀಡಿ

ಜಿ.ಹೆಚ್. ಧನ್ಯಕುಮಾರ್

ಬಾಳೆಹೊನ್ನೂರು: ಆಟೋ ಚಾಲಕರು ತಮ್ಮ ದೈನಂದಿನ ಕಾರ್ಯಗಳ ಜತೆಗೆ ಸಮಾಜಮುಖಿ ಸೇವೆಗಳಿಗೆ ಆದ್ಯತೆ ನೀಡಬೇಕು ಎಂದು ಬಿ.ಕಣಬೂರು ಗ್ರಾಪಂ ಸದಸ್ಯ ಎಂ.ಎಸ್.ಅರುಣೇಶ್ ಹೇಳಿದರು.

ಪಟ್ಟಣದ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಆಯೋಜಿಸಿದ್ದ ,ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಾಳೆಹೊನ್ನೂರಿನ ಆಟೋ ಚಾಲಕರು ಹಲವಾರು ವರ್ಷಗಳಿಂದ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಕನ್ನಡದ ಉಳಿವಿಗಾಗಿ ರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಿ ಕನ್ನಡದ ಹಿರಿಮೆಯನ್ನು ಮನೆ, ಮನಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಗ್ರಾಪಂ ಸದಸ್ಯೆ ಕೋಕಿಲಮ್ಮ ಮಾತನಾಡಿ, ಕನ್ನಡದ ಬಗ್ಗೆ ವರ್ಣನೆ ಮಾಡಲು ಪದಗಳು ಸಾಲುವುದಿಲ್ಲ. ತಾಯಿ ಭುವನೇಶ್ವರಿ ಸೇವೆ ಮಾಡುವುದು ನಮ್ಮೆಲ್ಲರ ಸೌಭಾಗ್ಯ. ಕನ್ನಡ ಎಂದರೆ ಅದೊಂದು ಜನಪದ, ಕಲೆ, ಸಂಸ್ಕೃತಿ, ಸಂಸ್ಕಾರವಾಗಿದೆ. ಕನ್ನಡದ ಬೆಳವಣಿಗೆ, ಉಳಿವಿಗೆ ಆಟೋ ಚಾಲಕರ ಕೊಡುಗೆ ಅಪಾರ ಎಂದರು.

ಕಾಫಿ ಬೆಳೆಗಾರ ಸಿ.ಎಂ.ಮಹಾದೇವಗೌಡ, ಬಿ.ಕಣಬೂರು ಗ್ರಾಪಂ ಉಪಾಧ್ಯಕ್ಷೆ ವಿ.ರಂಜಿತಾ, ಗ್ರಾಪಂ ಸದಸ್ಯರಾದ ಶಿವಪ್ಪ, ಜಯಲಕ್ಷ್ಮಿ, ಮಹಮ್ಮದ್ ಜುಹೇಬ್, ಡಿ.ಸರಿತಾ, ಸಿಸಿಲಿಯಾ, ಫಿಲೋಮಿನಾ, ಎನ್.ಎನ್.ಪ್ರತಿಮಾ, ಇ.ಎಸ್.ಜಯಂತಿ, ಮಾಜಿ ಅಧ್ಯಕ್ಷ ಜಾನ್ ಡಿಸೋಜಾ, ಹಿರಿಯ ಆಟೋ ಚಾಲಕ ಕೃಷ್ಣ, ಜುಬೇರ್, ಈಶ್ವರ್, ಪೆಡ್ಡಿ ದಾಲ್ಮೇದಾ, ಏಜಾಸ್, ಫಿಲಿಪ್ ಮಿಸ್ಕಿತ್, ರತ್ನ, ಆಟೋ ಚಾಲಕರ ಸಂಘದ ಕಾರ್ಯದರ್ಶಿ ಸುನೀಲ್ ಪ್ರಭು, ಖಜಾಂಚಿ ಎಲ್.ಮಧುಸೂದನ್, ಉಪಾಧ್ಯಕ್ಷ ಮಹಮ್ಮದ್ ಶರೀಫ್, ಜಗದೀಶ್ ಅರಳಿಕೊಪ್ಪ ಮತ್ತಿತರರು ಹಾಜರಿದ್ದರು.