ಕನ್ನಡ ಸಂಘ ಹಾಗೂ ಏರ್‌ಫೋರ್ಸ್ ಸ್ಟೇಶನ್ ಜಾಮ್ನಗರ ಸದಸ್ಯರು 
ಜಿಲ್ಲೆ

ಏರ್‌ಫೋರ್ಸ್ ಸ್ಟೇಷನ್‌ನ ಕನ್ನಡ ಸಂಘದಿಂದ ರಾಜ್ಯೋತ್ಸವ ಸಂಪನ್ನ

ಇಂದಿರಾ ಎನ್ ಕೆ

ಜಾಮ್‌ನಗರ್ (ಗುಜರಾತ್): ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಸಂಘ ಹಾಗೂ ಏರ್‌ಫೋರ್ಸ್ ಸ್ಟೇಶನ್ ಜಾಮ್ನಗರ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮ ಬುಧವಾರ ಕೊನೆಗೊಂಡಿತು.

ಭುವನೇಶ್ವರಿ ತಾಯಿ ಪೂಜೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ನವೀನ್ ರಾಜ್ಯೋತ್ಸವದ ಹಿನ್ನೆಲೆ ಕುರಿತು ವಿವರಿಸಿದರು.

ಕನ್ನಡ ಸಂಘದ ಸದಸ್ಯರಾದ ಪ್ರಶಾಂತ್ ವಿಜಯಪುರ, ಅಜಿತ್ ಕುಮಾರ್, ಸಂತೋಷ್ ಪಾಟೀಲ್, ವಿಜಯ್ ಪಾಟೀಲ್, ರಾಘವೇಂದ್ರ, ಉಮೇಶ್, ಚಂದ್ರಶೇಖರ್, ಭರತ್ ಗೌಡ, ಸಂದೀಪ್ ಶೆಟ್ಟಿ, ಸಾಯಿನಾಥ್ ಮತ್ತಿತರರು ಉಪಸ್ಥಿತರಿದ್ದರು. ಬೆಳಗಾವಿಯ ಶಿವಾನಂದ್ ಸ್ವಾಗತಿಸಿದರು. ಮಂಗಳೂರಿನ ದುರ್ಗಾಕಾವೇರಿ ಎಚ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕನ್ನಡ ಭಾಷೆ, ನುಡಿ ಪರಂಪರೆ ಬಿಂಬಿಸುವ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಾತೃಭೂಮಿಯಿಂದ ದೂರ ಇದ್ದು, ದೇಶ ಸೇವೆ ಮಾಡುತ್ತಿರುವ ಸೈನಿಕರ ಮಕ್ಕಳು, ಹಾಗೂ ಮನೆಯವರು ಅತೀ ಉತ್ಸಾಹದಿಂದ ಕನ್ನಡದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.