ಬಳ್ಳಾರಿ: ಎನ್ ಸಿ ಎ, ಎನ್ ಆರ್ ಸಿ ವಿರುದ್ಧ ನಾವು ಮುಂದೆಯೂ ನಗರ ಸೇರಿ ವಿವಿಧೆಡೆ ಪ್ರತಿಭಟನೆ ಮಾಡುತ್ತೇವೆ, ಯಾವ ಹೆದರಿಕೆಗೂ ನಾವು ಬಗ್ಗಲ್ಲ ಎಂದು ರಾಜ್ಯಸಭಾ ಸದಸ್ಯ ಸಯ್ಯದ್ ನಾಸೀರ್ ಹುಸೇನ್ ಹೇಳಿದ್ದಾರೆ.
ಪ್ರಚೋದನಕಾರಿ ಭಾಷಣ ಮಾಡಿರುವ ಸೋಮಶೇಖರರಡ್ಡಿಯವರನ್ನು ಪೊಲೀಸರು ಕೂಡಲೇ ಬಂಧಿಸಬೇಕು.ಪ್ರಚೋದನಕಾರಿ ಭಾಷಣ ಮಾಡದ ಯು.ಟಿ.ಖಾದರ್ ಮೇಲೆ ಪೊಲೀಸರಿಗೆ ಪ್ರಕರಣ ದಾಖಲಿಸಲು ಬರುತ್ತದೆ. ಸೋಮಶೇಖರಡ್ಡಿಯವರನ್ನು ಬಂಧಿಸಲು ಏಕೆ ಬರುವುದಿಲ್ಲ…?. ನಾವೇನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದವಾ…? ಎಲ್ಲಿದ್ದೇವೆ ಎಂಬ ಸಂಶಯ ಮೂಡಿದೆ.ಈ ದೇಶದ ಇತಿಹಾಸ, ಸಂಸ್ಕೃತಿಯನ್ನು ಶಾಸಕರು ತಿಳಿದುಕೊಳ್ಳಲಿ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬಾಯಿಗೆ ಬಂದಂತೆ ಮಾತನಾಡುವುದು ತರವಲ್ಲ.ಕಾಂಗ್ರೆಸ್ ಪಕ್ಷದವರಿಗೆ ಬೇಕೂಫ್ ಎಂದವರಿಗೆ ಏನಾಗಿತ್ತು ಎಂಬುದನ್ನು ಹಿಂದಿನ ಘಟನೆ ನೆನಪಿಸಿಕೊಳ್ಳಬೇಕು.ಹಿಂದೆ ಇದೇ ಕಾಂಗ್ರೆಸ್ ಪಕ್ಷದ ಮುಖಂಡರು ಪಾದಯಾತ್ರೆ ನಡೆಸಿದ್ದರಿಂದ ಯಾರು ಜೈಲು ಅನುಭವಿಸಿ ಬಂದರೂ ಎಂಬುದನ್ನು ಸೋಮಶೇಖರ ರೆಡ್ಡಿ ಮರೆಯದಿರಲಿ ಎಂದು ಕಿಡಿಕಾರಿದರು.
ವಿಪ ಸದಸ್ಯ ಕೆ.ಸಿ.ಕೊಂಡಯ್ಯ ಮಾತನಾಡಿ,ಆರ್ ಎಸ್ಎಸ್ ಸ್ವಾತಂತ್ತ್ಯಕ್ಕೆ ವಿರೋಧ ಮಾಡಿತ್ತು.ಇಂಥವರಿಂದ ಪ್ರೇರಣೆಗೊಂಡಿರುವ ಸೋಮಶೇಖರ ರೆಡ್ಡಿ ಅವರು ಇನ್ನಾದರೂ ಬಾಯಿಗೆ ಬೀಗ ಹಾಕಿಕೊಳ್ಳಬೇಕು.
ರೆಡ್ಡಿ ಬಂಧಿಸುವಲ್ಲಿ ಪೊಲೀಸರು ಹಿಂದೇಟು ಹಾಕುತ್ತಿರುವುದು ಸರಿಯಲ್ಲ.ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಿಪ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಮಾಜಿ ಶಾಸಕ ಸೂರ್ಯ ನಾರಾಯಣ ರೆಡ್ಡಿ, ಕಾಂಗ್ರೆಸ್ ಮುಖಂಡರಾದ ಆಂಜನೇಯಲು, ಮಾನಣ್ಣ ಇದ್ದರು.
ಹೊಸ ವರ್ಷ ಬಳ್ಳಾರಿಯಲ್ಲಿ ಬಹಳ ದುಃಖದಿಂದ ಪ್ರಾರಂಭವಾಗಿದೆ.ಬಳ್ಳಾರಿ ಶಾಸಕ ಜಿ.ಸೋಮಶೇಖರರಡ್ಡಿ ಪ್ರಚೋದನಕಾರಿ ಭಾಷಣ ಮಾಡಿರುವುದು ಸರಿಯಲ್ಲ.ಬಸವಣ್ಣನರ ನಾಡಿನಲ್ಲಿ ಇಂಥವರು ಇರುವುದು ದುರದೃಷ್ಟಕರ.ಮುಸ್ಲಿಮರು ರೆಡ್ಡಿ ಹೇಳಿಕೆಗೆ ಎದೆಗುಂದಬೇಕಿಲ್ಲ, ನಿಮ್ಮೊಂದಿಗೆ ನಾವಿದ್ದೇವೆ.ಜನರಲ್ಲಿ ಕೋಮು-ಭಾವನೆ ಬಿತ್ತಿರುವ ಸೋಮಶೇಖರರಡ್ಡಿ ಅವರ ನಡೆ ಖಂಡನಾರ್ಹ.ಇನ್ನಾದರೂ ಅವರು ತಮ್ಮ ನಡೆ ತಿದ್ದಿಕೊಳ್ಳಬೇಕು. ಇಲ್ಲದಿದ್ದರೇ ನಾವು ರೊಚ್ಚಿಗೊಳ್ಳಬೇಕಾಗುತ್ತದೆ.
ಅಲ್ಲಂ ವೀರಭದ್ರಪ್ಪ ವಿಧಾನಪರಿಷತ್ ಸದಸ್ಯರು
ಸೋಮಶೇಖರರಡ್ಡಿ ಶಾಸಕರಾಗಿರಲು ಸೂಕ್ತನಾ…?, ಬಳ್ಳಾರಿಯಲ್ಲಿರಲು ಇರಲು ನಿನಗೆ ಹಕ್ಕಿಲ್ಲ. ಮುಂದೆ ಇದೇ ರೀತಿ ಮುಂದುವರಿದರೇ ನಾವು ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ಹೋರಾಟದ ಮೂಲಕ ಏನು ಮಾಡಬೇಕು ಮಾಡ್ತೇವೆ.
ಸೂರ್ಯ ನಾರಾಯಣರೆಡ್ಡಿ ಮಾಜಿ ಶಾಸಕರು