ಜಿಲ್ಲೆ

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಪಂಕಜ ಕೆ.ಎಂ.

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿ ತೇರ್ಗಡೆಯಾಗಿರುವ ಒಕ್ಕಲಿಗ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ವಿದ್ಯಾಭಾಸ್ಯ ನಡೆಸಿ ಶೇ. 95ಕ್ಕಿಂತ ಅಧಿಕ ಹಾಗೂ ಸರ್ಕಾರೇತರ ಶಾಲೆ ಕಾಲೇಜುಗಳಲ್ಲಿ ಕಲಿತು ಶೇ. 98ಕ್ಕಿಂತ ಹೆಚ್ಚು ಅಂಕಗಳಿಸಿರುವ ಒಕ್ಕಲಿಗ ಜನಾಂಗದ ವಿದ್ಯಾರ್ಥಿಗಳು ಜೂ.15ರೊಳಗೆ ಸ್ವ-ವಿವರ, ಶಾಲೆ ಅಥವಾ ಕಾಲೇಜಿನ ಹೆಸರು, ಅಂಕಪಟ್ಟಿ ನಕಲು ಪ್ರತಿ, ಜಾತಿ ಪ್ರಮಾಣ ಪತ್ರ, ಸಂಘದ ಗುರುತಿನ ಚೀಟಿ, ಬ್ಯಾಂಕ್ ಖಾತೆ ವಿವರದೊಂದಿಗೆ ಅರ್ಜಿ ಸಲ್ಲಿಸುವಂತೆ ಸಂಘ ಹೇಳಿದೆ.

ಸಂಘದ ಕೇಂದ್ರ ಕಚೇರಿ ಹಾಗೂ ಸಂಘದ ವೆಬ್‌ಸೈಟ್: www.rvsangha.org ನಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕೆಂದು. ಪ್ರಶಸ್ತಿ ಪ್ರದಾನ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಸಂಘದ ಅಧ್ಯಕ್ಷ ಡಿ. ಹನುಮಂತಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಜಯಮುತ್ತು ತಿಳಿಸಿದ್ದಾರೆ.

ವಿಳಾಸ: ಪ್ರತಿಭಾ ಪುರಸ್ಕಾರ ವಿಭಾಗ, ನಾಡಪ್ರಭು ಕೆಂಪೇಗೌಡ ಭವನ, ರಾಜ್ಯ ಒಕ್ಕಲಿಗರ ಸಂಘ, ಕೆ.ಆರ್. ರಸ್ತೆ, ವಿ.ವಿ. ಪುರ, ಬೆಂಗಳೂರು-04.