ಯಳಂದೂರು: ಪಟ್ಟಣದ ಎಲೇಕೇರಿ ಬೀದಿಯಲ್ಲಿ ಇತ್ತೀಚೆಗೆ ರಾಜವೀರ ಮದಕರಿ ನಾಯಕ ಯುವ ಸೇನಾ ಸಂಘವನ್ನು ಗ್ರಾಮದ ಮುಖಂಡ ಎನ್.ಮೂರ್ತಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಸಂಘದ ಮೂಲಕ ಯುವಕರು ಹೆಚ್ಚು ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಸಮುದಾಯದಲ್ಲಿ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ಹರಡುವುದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಸೇರಿದಂತೆ ಸ್ಪರ್ಧಾತ್ಮಕ ಪದವಿಗಳಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಇವರಿಗೆ ಅಗತ್ಯ ನೆರವು ನೀಡಬೇಕು. ಬಡವರು, ಅನಕ್ಷರಸ್ಥರಿಗೆ ಸರ್ಕಾರಿ ಸೌಲಭ್ಯ ಒದಗಿಸಬೇಕು. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ಸಂಘದ ಅಧ್ಯಕ್ಷರಾಗಿ ರಂಗನಾಥ್, ಗೌರವಾಧ್ಯಕ್ಷರಾಗಿ ರಾಘು, ಉಪಾಧ್ಯಕ್ಷ ಮಂಜುನಾಥ್ ಹಾಗೂ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.