ಜಿಲ್ಲೆ

ರಾಜು ಶೇಡಬಾಳೆಗೆ ಚಿನ್ನದ ಪದಕ

ಎಂ.ಎಸ್​.ಹಿರೇಮಠ ಬೆಳಗಾವಿ

ಗುರ್ಲಾಪುರ: ಉತ್ತರ ಪ್ರದೇಶದ ಅಯೋಧ್ಯ ಆಚಾರ್ಯ ನರೇಂದ್ರದೇವ ಕೃಷಿ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ 22ನೇ ಅಖಿಲ ಭಾರತ ಅಂತರ ಕೃಷಿ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಹಿರಿಯೂರು ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ, ಗ್ರಾಮದ ರಾಜು ಶೇಡಬಾಳೆ 400 ಮೀಟರ್​ ಓಟ ಹಾಗೂ 4+100ಮೀ. ರಿಲೇಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ವಿದ್ಯಾರ್ಥಿ ಸಾಧನೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.