ಜಿಲ್ಲೆ

ಅಧ್ಯಕ್ಷರಾಗಿ ರಾಜು ಮೆಂಡನ್ ಆಯ್ಕೆ

ಇಂದಿರಾ ಎನ್ ಕೆ

ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಶ್ರೀ ಗುಹೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷರಾಗಿ ರಾಜು ಮೆಂಡನ್ ತ್ರಾಸಿ ಆಯ್ಕೆಯಾಗಿದ್ದಾರೆ.

ಸಮಿತಿ ಸದಸ್ಯರಾಗಿ ರಘುರಾಮ, ಶಾರದಾ ದೇವಾಡಿಗ, ಸುಶಾಂತ ಪೂಜಾರಿ, ಸುಧೀರ್, ಅನಿಲ ಮೆಂಡನ್ ಅರಾಟೆ, ರಾಜೀವ ಮೊಗವೀರ ತ್ರಾಸಿ, ನಾಗೇಶ್ ಖಾರ್ವಿ ಆಯ್ಕೆಯಾಗಿದ್ದಾರೆ. ಗುಜ್ಜಾಡಿ ಗ್ರಾಮ ಕರಣಿಕ, ದೇವಸ್ಥಾನ ಆಡಳಿತಾಧಿಕಾರಿ ಸೋಮಣ್ಣ ರಾಜು ಮೆಂಡನ್ ತ್ರಾಸಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಗುಜ್ಜಾಡಿ ಗ್ರಾ.ಪಂ. ಸದಸ್ಯರಾದ ರಾಜು ಪೂಜಾರಿ, ಶೇಖರ್ ದೇವಾಡಿಗ, ಸ್ಥಳೀಯ ಮುಖಂಡರಾದ ಹರೀಶ್ ಕೊಡಪಾಡಿ, ಭಾಸ್ಕರ ಗಾಣಿಗ, ರಾಜು ಗಾಣಿಗ, ಅರ್ಚಕರು ಉಪಸ್ಥಿತರಿದ್ದರು.