ಭಟ್ಕಳ: ಇಲ್ಲಿಯ ವಿಶ್ವಕರ್ಮ ಗೆಳೆಯರ ಬಳಗದ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಪ್ರೀಮಿಯರ್ ಲೀಗ್ನ ವಿಶ್ವಕರ್ಮ ಟ್ರೋಫಿಯನ್ನು ಎಸ್.ಪಿ.ಸ್ಟ್ರೈಕರ್ಸ್ ತಂಡವನ್ನು ಮಣಿಸುವ ಮೂಲಕ ರಾಜು ಬಾಯ್್ಸ ತಂಡ ತನ್ನದಾಗಿಸಿಕೊಂಡಿದೆ.
ಶಿರಾಲಿಯ ತಟ್ಟಿಹಕ್ಕಲಿನ ಗ್ರೀನ್ ಪಾರ್ಕ್ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ಪಂದ್ಯಾವಳಿ ನಡೆಯಿತು. ಶಿರೂರಿನಿಂದ ಕುಮಟಾದವರೆಗಿನ ವಿಶ್ವಕರ್ಮ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಪಂದ್ಯಾವಳಿ ಆಯೋಜಿಸಲಾಗಿತ್ತು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ರಾಜು ಬಾಯ್್ಸ ತಂಡ ಪ್ರಥಮ ಬಹುಮಾನ ಹಾಗೂ ಟ್ರೋಫಿ ಪಡೆದುಕೊಂಡಿತು. ರೋಚಕ ಪಂದ್ಯದಲ್ಲಿ ಎಸ್.ಪಿ.ಸ್ಟ್ರೈಕರ್ಸ್ ದ್ವಿತೀಯ ಬಹುಮಾನ ಪಡೆಯಿತು.
ಫೈನಲ್ ಪಂದ್ಯದಲ್ಲಿ ರಾಜು ಬಾಯ್್ಸ ತಂಡದ ಸಚಿನ್ ಆಚಾರ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಎಸ್.ಪಿ. ಸ್ಟ್ರೈಕರ್ಸ್ ತಂಡದ ಚಂದ್ರಹಾಸ ಉತ್ತಮ ಬ್ಯಾಟ್ಸಮನ್ ಪ್ರಶಸ್ತಿ ಪಡೆದರು. ಅದೇ ತಂಡದ ನಾಗೇಂದ್ರ ಆಚಾರ್ಯ ಉತ್ತಮ ಬೌಲರ್ ಪ್ರಶಸ್ತಿಗೆ ಆಯ್ಕೆಯಾದರು. ಎಸ್.ಪಿ. ಸ್ಟ್ರೈಕರ್ಸ್ ತಂಡದ ಚಂದ್ರಹಾಸ ಸರಣಿ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದರು. ಕಾಸ್ಮುಡಿ ಕ್ರಿಕೆಟ್ ಟೀಮ್ ಶಿಸ್ತಿನ ತಂಡ ಪ್ರಶಸ್ತಿಗೆ ಆಯ್ಕೆಯಾದರು.
ಗಜಾನನ ಎನ್. ಆಚಾರ್ಯ ವೆಂಕಟಾಪುರ, ಗೋವಿಂದ ಆಚಾರ್ಯ ಕವೂರು, ರೋಹಿತ್ ಜೆ. ಆಚಾರ್ಯ ಶಿರಾಲಿ, ಗಂಗಾಧರ ಪುರೋಹಿತ( ವಿಶ್ವಕರ್ಮ ಪರಬ್ರಹ್ಮ ಕ್ಷೇತ್ರ ಗುಡಿಗದ್ದೆ), ಕೇಶವ ಎ.ಆಚಾರ್ಯ ಸುಭಾಷ ನಗರ, ಸುಬೋಧ ಎಸ್. ಆಚಾರ್ಯ ಜಾಲಿ, ಜಗದೀಶ ಆಚಾರ್ಯ ಮುರ್ಡೆಶ್ವರ, ವೆಂಕಟರಮಣ ಆಚಾರ್ಯ ತೆರ್ನಮಕ್ಕಿ, ಇತರರು ಉಪಸ್ಥಿತರಿದ್ದರು.