ಹುಬ್ಬಳ್ಳಿ: ಪ್ರತಿ ಮಳೆಗಾಲದಲ್ಲಿ ರಾಜನಾಲೆಯ ನೀರು ಉಕ್ಕಿ ಹರಿದು ಜನಜೀವನ ಅಸ್ತವ್ಯಸ್ತತವಾಗುವ ಹಿನ್ನೆಲೆಯಲ್ಲಿ ಕಾಲುವೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಹಾಗೂ ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರು ಚಾಲನೆ ನೀಡಿದರು.
ಮಿಲ್ಲತ್ ನಗರದಲ್ಲಿ 3.5 ಕೋಟಿ ರೂ. ಅನುದಾನದಲ್ಲಿ ರಾಜನಾಲಾ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ತಡೆಗೋಡೆ ನಿರ್ಮಾಣದಿಂದ ಜನರು ಮಳೆಗಾಲದಲ್ಲೂ ನೆಮ್ಮದಿಯ ಜೀವನ ನಡೆಸಬಹುದು ಎಂದರು.
ಮಳೆಗಾಲದಲ್ಲಿ ನಾಲಾ ಕೊಳಚೆ ನೀರು ಮನೆಗಳಿಗೆ ನುಗ್ಗಿ ಅವಾಂತರವೇ ಸೃಷ್ಟಿಯಾಗುತ್ತಿತ್ತು. ಈ ನಿಟ್ಟಿನಲ್ಲಿ ಆದ್ಯತೆ ಮೇರೆಗೆ ರಾಜನಾಲಾಕ್ಕೆ ಹಂತ ಹಂತವಾಗಿ ತಡೆಗೋಡೆ (ರಿಟೇನಿಂಗ್ ವಾಲ್) ನಿರ್ಮಾಣ ಮಾಡಲಾಗುತ್ತಿದೆ. ಹಳೇಹುಬ್ಬಳ್ಳಿ ಸದರ ಸೋಫಾ, ಎಸ್.ಎಂ. ಕೃಷ್ಣಾ ನಗರ, ಮಿಲ್ಲತ್ ನಗರ ಸೇರಿ ಪೂರ್ವ ಕ್ಷೇತ್ರದಲ್ಲಿ ರಾಜನಾಲಾ ಉದ್ದಕ್ಕೂ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಸ್ಥಳಿಯ ನಿವಾಸಿಗಳು ಉಪಸ್ಥಿತರಿದ್ದರು.