ಜಿಲ್ಲೆ

ದೇಶಕ್ಕೆ ರಾಜೀವ್ ಗಾಂಧಿ, ದೇವರಾಜ ಅರಸು ಕೊಡುಗೆ ಅನನ್ಯಕಾಂಗ್ರೆಸ್ ಕಚೇರಿಯಲ್ಲಿ ಇಬ್ರಾಹಿಂ ಕೋಡಿಜಾಲ್ ಅಭಿಮತ

ಮಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಸಿಎಂ ದೇವರಾಜು ಅರಸು ದೇಶ ಹಾಗೂ ರಾಜ್ಯದಲ್ಲಿ ಜನಪರ ಯೋಜನೆಗಳನ್ನು ಸಾಕಾರಗೊಳಿಸಿ ಬಡವರ, ಹಿಂದುಳಿದವರ, ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸಿದವರು ಎಂದು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು.


ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಭಾನುವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಜನ್ಮದಿನ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಸ್ಮರಿಸಲಾಯಿತು.


ರಾಜೀವ್ ಗಾಂಧಿ ಅವರು ಅಧಿಕಾರವಧಿಯಲ್ಲಿ ಟೆಲಿಕಾಂ ಕ್ರಾಂತಿ, ಕಂಪ್ಯೂಟರೀಕರಣ, ಪಂಚಾಯಿತಿ ರಾಜ್, ಮತದಾನ ವಯಸ್ಸಿನ ಇಳಿಕೆ ಮೊದಲಾದ ಕಾರ್ಯಕ್ರಮಗಳ ಮೂಲಕ ಬಲಶಾಲಿಯಾದ ಆಧುನಿಕ ಭಾರತ ಕಟ್ಟಿದವರು ಎಂದರು.


ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಭೂ ಸುಧಾರಣೆ, ಜೀತ ವಿಮುಕ್ತಿ, ಋಣಮುಕ್ತ ಯೋಜನೆ ಸೇರಿದಂತೆ ಜನಪರ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದು ಜನರಿಗೆ ತಲುಪಿಸಿದವರು ಎಂದು ಸ್ಮರಿಸಿದರು.


ಮಾಜಿ ಶಾಸಕ ಜೆ.ಆರ್. ಲೋಬೊ, ಮುಖಂಡರಾದ ಸದಾಶಿವ ಉಳ್ಳಾಲ್, ಅಬ್ದುಲ್ ಸಲೀಂ.ಜೆ, ವಿಶ್ವಾಶ್ ಕುಮಾರ್ ದಾಸ್, ಶುಭಾಷ್ ಶೆಟ್ಟಿ ಕೊಲ್ನಾಡ್, ಎಸ್.ಅಪ್ಪಿ, ಶಾಹುಲ್ ಹಮೀದ್ ಕೆ.ಕೆ, ಜೆಸಿಂತ ಆಲ್ಫ್ರೆಡ್, ಟಿ.ಹೊನ್ನಯ್ಯ, ಕೌಶಲ್ ಪ್ರಸಾದ್ ಶೆಟ್ಟಿ, ನೀರಜ್ ಪಾಲ್, ನಝೀರ್ ಬಜಾಲ್, ವಿಕಾಸ್ ಶೆಟ್ಟಿ, ಶಾಂತಲಾ ಗಟ್ಟಿ, ಮಲ್ಲಿಕಾ ಪಕಳ, ಪ್ರಕಾಶ್ ಸಾಲ್ಯಾನ್, ಕೇಶವ ಮಾರೋಳಿ, ರಮಾನಂದ ಪೂಜಾರಿ, ಹುಸೈನ್ ಕಾಟಿಪಳ್ಳ, ಯಶವಂತ್ ಪ್ರಭು, ಸಲೀಂ ಕುದ್ರೋಳಿ, ಟಿ.ಕೆ ಸುಧೀರ್ ಮೊದಲಾದವರಿದ್ದರು.


ಜಿಲ್ಲಾ ಕಾಂಗ್ರೆಸ್ ಸೇವಾದಳ ಮುಖ್ಯಸ್ಥ ಜೋಕಿಂ ಡಿಸೋಜ ಸ್ವಾಗತಿಸಿದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು.