ಜಿಲ್ಲೆ

ಕರ್ತವ್ಯದಲ್ಲಿದ್ದ ಗುಪ್ತಚರ ಇಲಾಖೆ ಸಿಬ್ಬಂದಿ ಹೃದಯ ಸ್ಥಂಭನದಿಂದ ಸಾವು

Mangaluru - Prakash MC Manjeshwar

ಮಂಗಳೂರು : ಗುಪ್ತಚರ ಇಲಾಖೆಯ ಮಂಗಳೂರು ಘಟಕದ ಸಹಾಯಕ ಗುಪ್ತಚರ ಅಧಿಕಾರಿ ರಾಜೇಶ್ ಬಿ.ಯು (53) ಅವರು ಶನಿವಾರ ಕರ್ತವ್ಯದಲ್ಲಿ ಇರುವಾಗಲೇ ಹಠಾತ್ ಹೃದಯ ಸ್ಥಂಭನಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ನಗರದ ಕೊಟ್ಟಾರ ಚೌಕಿ ಬಳಿಯಿರುವ ಕಚೇರಿಯಲ್ಲಿ ಮಧ್ಯಾಹ್ನ ಕರ್ತಬ್ಯದಲ್ಲಿ ಇರುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ರೆಸ್ಟ್ ರೂಮಿಗೆ ತೆರಳಿ ವಿಶ್ರಾಂತಿ ಪಡೆಯುವ ಯತ್ನದಲ್ಲಿ ಇರುವಾಗಲೇ ಅವರು ಕುಸಿದು ಬಿದ್ದಿದ್ದಾರೆ. ಈ ಘಟನೆ ನಡೆದು ಏಳು ನಿಮಿಷದಲ್ಲಿ ಸಹೊದ್ಯೋಗಿಗಳು ಅವರನ್ನು ಹತ್ತಿರದ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.
1993 ನೇ ಬ್ಯಾಚ್ ನವರಾಗಿರುವ ರಾಜೇಶ್, ಇನ್ನೂ ಏಳು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಬೇಕಿತ್ತು. ಸುರತ್ಕಲ್ ಹಾಗೂ ಪಣಂಬೂರು ಪೊಲೀಸ್ ಠಾಣೆಯ ಸಿಬ್ಬಂದಿಯೂ ಆಗಿದ್ದರು.
ಇವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಮೃತರ ಪತ್ನಿ ಪ್ರೇಮಾ ರಿಜಿಸ್ಟ್ರಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.