ಮಂಡ್ಯ: ಧನುಷ್ ಕಂಬೈನ್ಸ್ ಬ್ಯಾನರ್‌ನಡಿ ನಿರ್ಮಿಸಿರುವ ಬಹು ತಾರಾಗಣದ ರಾಜದ್ರೋಹಿ ಕನ್ನಡ ಚಲನಚಿತ್ರ ಏ.10ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ನಿರ್ದೇಶಕ ಸಮರ್ಥರಾಜ್ ತಿಳಿಸಿದರು.
ರಾಜದ್ರೋಹಿ ಕನ್ನಡ ಸೊಗಡಿನ ಅಪ್ಪಟ ಸೊಗಡಿನ ಚಲನಚಿತ್ರ. ಹಲವು ವರ್ಷದ ನಂತರ ಹಿರಿಯ ಕಲಾವಿದರಾದ ಅನಂತ್‌ನಾಗ್, ಲಕ್ಷ್ಮೀ ಮತ್ತೊಮ್ಮೆ ತೆರೆಯ ಮೇಲೆ ಕಾಣಲಿದ್ದಾರೆ. ಶರಣ್, ಅಚ್ಯುತ್‌ಕುಮಾರ್, ಒರಟ ಪ್ರಶಾಂತ್, ಅಜಿತ್, ಯೋಗಿ ಸೇರಿದಂತೆ ಹಿರಿಯ ಕಲಾವಿದರ ತಾರಾಗಣವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದೊಂದು ಸ್ವಮೇಕ್ ಚಲನಚಿತ್ರವಾಗಿದ್ದು, 3.25 ಕೋಟಿ ರೂ ವ್ಯಯಿಸಲಾಗಿದೆ. ಮಂಡ್ಯ, ಮೈಸೂರು, ತುಮಕೂರು ಹಾಗೂ ಚಾಮರಾಜನಗರದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.
ನಿರ್ಮಾಪಕ ಮಹದೇವಯ್ಯ, ಬೇಲೂರು ಸೋಮಶೇಖರ್, ಸೂರಿ, ಧನುಷ್ ಇದ್ದರು.