ಬೈಂದೂರು: ಸಾಂಸ್ಕೃತಿಕ ರಂಗದಲ್ಲಿ ಅವಿರತವಾಗಿ ತೊಡಗಿಸಿಕೊಂಡು ಜನಮಾನಸದಲ್ಲಿ ಸ್ಥಾನ ಪಡೆದಿರುವ ಸುರಭಿ ಸಂಸ್ಥೆ ಹಲವು ಸಾಧನೆ ಮೈಲುಗಲ್ಲುಗಳನ್ನು ದಾಟಿ 25ನೇ ವರ್ಷದ ಸಂಭ್ರಮದಲ್ಲಿರುವುದು ಶ್ಲಾಘನಾರ್ಹ ಸಂಗತಿ ಎಂದು ಉದ್ಯಮಿ ಶಿರೂರು ಪ್ರಸಾದ ಪ್ರಭು ಹೇಳಿದರು.
ರೋಟರಿ ಸಮುದಾಯ ಭವನದಲ್ಲಿ ಶುಕ್ರವಾರ ಸುರಭಿ ಸಂಸ್ಥೆ ಬೆಳ್ಳಿಹಬ್ಬದ ಅಂಗವಾಗಿ ಸೆ.14ರಂದು ಆಯೋಜಿಸಲಾಗಿರುವ ರಜತಯಾನ-2024 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಸುರಭಿ ಸಂಸ್ಥೆ ಅಧ್ಯಕ್ಷ ಆನಂದ ಮದ್ದೋಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಲಕ್ಷ್ಮಣ ಕೊರಗ, ನಿಕಟಪೂರ್ವಾಧ್ಯಕ್ಷ ನಾಗರಾಜ ಪಿ.ಯಡ್ತರೆ ಉಪಸ್ಥಿತರಿದ್ದರು. ನಿರ್ದೇಶಕ ಸುಧಾಕರ ಪಿ.ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ ನಿರೂಪಿಸಿದರು.