ಜಿಲ್ಲೆ

ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ಸ್

ಮಡಿಕೇರಿ: ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೈದಾನದಲ್ಲಿ ಸಹರಾ ಕ್ರಿಕೆಟ್ ಕ್ಲಬ್ ಕುಶಾಲನಗರ ಹಮ್ಮಿಕೊಂಡಿದ್ದ ಐಪಿಎಲ್ ಮಾದರಿಯ ಎರಡನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.


ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಗದಿತ ೫ ಓವರ್‌ನಲ್ಲಿ ೬ ವಿಕೆಟ್ ನಷ್ಟಕ್ಕೆ ೩೯ ರನ್ ಕಲೆ ಹಾಕಿದರು. ೪೦ ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡ ಫರ್ಹಾನ್ ಹಾಗೂ ಸಾಬುದ್ದೀನ್ ಅವರ ಅಮೋಘ ಜೊತೆಯಾಟದ ನೆರವಿನಿಂದ ೩.೫ ಓವರ್‌ನಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿ, ಚಾಂಪಿಯನ್ ಪಟ್ಟ ಅಲಂಕರಿಸಿತು.


ಒಂದು ಲಕ್ಷ ರೂ ನಗದು ಬಹುಮಾನ ಹಾಗೂ ಒಂದು ಲಕ್ಷಕ್ಕೂ ಅಧಿಕ ಬೆಲೆಬಾಳುವ ಐಪಿಎಲ್ ಮುದ್ರಿತ ಚಿನ್ನದ ಟ್ರೋಫಿ ರಾಜಸ್ಥಾನ್ ತಂಡದ ಪಾಲಾದರೆ, ಸತತ ಎರಡನೇ ಬಾರಿಯ ಪ್ರಶಸ್ತಿಯನ್ನು ಗೆಲ್ಲುವ ಕನಸಿನಲ್ಲಿದ್ದ ಪಂಜಾಬ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.


ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ನಿಗದಿತ ಓವರ್‌ನಲ್ಲಿ ೬ ವಿಕೆಟ್ ನಷ್ಟಕ್ಕೆ ೩೪ ರನ್ ಕಲೆ ಹಾಕಿದರು. ಲಕ್ನೋ ತಂಡವು ಒಂದು ರನ್‌ಗಳಿಂದ ವಿರೋಜಿತ ಸೋಲು ಕಂಡಿತು.


ಮೊದಲನೆಯ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ೫ ಓವರ್‌ನಲ್ಲಿ ೬ ವಿಕೆಟ್ ಕಳೆದುಕೊಂಡು ೨೯ ರನ್ ಕಲೆ ಹಾಕಿತು. ಬೌಲಿಂಗ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಪಂಜಾಬ್ ತಂಡ ಗುಜರಾತ್ ತಂಡದ ವಿರುದ್ಧ ೧೫ ರನ್‌ಗಳ ಭರ್ಜರಿ ಗೆಲುವು ಪಡೆದು ದ್ವಿತೀಯ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಿತು.


ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಪಂಜಾಬ್ ತಂಡ ೪ ವಿಕೆಟ್ ನಷ್ಟಕ್ಕೆ ೫ ಓವರ್‌ನಲ್ಲಿ ೬೪ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿದರು. ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪಂಜಾಬ್ ತಂಡ ಲಕ್ನೋ ತಂಡದ ೮ ವಿಕೆಟ್ ಪಡೆದುಕೊಂಡು ೪೩ ರನ್‌ಗಳ ಭರ್ಜರಿ ಗೆಲುವು ಸಾಧಿಸಿ, ಫೈನಲ್ ಪ್ರವೇಶಿಸಿತು.


ಪಂದ್ಯಾವಳಿಯ ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್ ಹಾಗೂ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಪಂಜಾಬ್ ತಂಡದ ಹರೀಶ್, ಬೆಸ್ಟ್ ಬೌಲರ್ ರಾಜಸ್ಥಾನ್ ರಾಯಲ್ಸ್ ತಂಡದ ಶಿಯಾಬ್, ಬೆಸ್ಟ್ ವಿಕೇಟ್ ಕೀಪರ್ ಗುಜರಾತ್ ತಂಡದ ರಿಯಾಸ್(ಇಯ್ಯ) ಬೆಸ್ಟ್ ಕ್ಯಾಪ್ಟನ್ ಲಕ್ನೋ ತಂಡದ ಪರ್ಹಾನ್ ಹಾಗೂ ಫೆಯರ್ ಪ್ಲೇ ತಂಡದ ಪ್ರಶಸ್ತಿ ಗುಜರಾತ್ ತಂಡದ ಪಡೆದುಕೊಂಡಿತು.