ಜಿಲ್ಲೆ

ರಾಜಸ್ಥಾನ ಪ್ರವಾಸಿ ಪ್ರಕೋಶದಿಂದ ಮತದಾನ ಜಾಗೃತಿ

Dharwada - Basavaraj Idli

ಹುಬ್ಬಳ್ಳಿ: ರಾಜಸ್ಥಾನ ಪ್ರವಾಸಿ ಪ್ರಕೋಶ ಹುಬ್ಬಳ್ಳಿ& -ಧಾರವಾಡ ಟಕದ ಸಭೆಯನ್ನು ಇಲ್ಲಿಯ ಗೋಕುಲ ರಸ್ತೆ ಶ್ರೀ ರಾಜೇಶ್ವರ ಭವನದಲ್ಲಿ ಏರ್ಪಡಿಸಲಾಗಿತ್ತು.

ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಸಮಾಜದ ಎಲ್ಲ ಬಾಂಧವರು ತಮ್ಮ ತಮ್ಮ ಪ್ರದೇಶದಲ್ಲಿ ಮತದಾನ ಮಾಡಬೇಕು ಎಂದು ಸೂಚಿಸಲಾಯಿತು.

ಮತದಾನ ಹಬ್ಬ ಹಾಗೂ ಪ್ರಜಾಪ್ರಭುತ್ವ ಬಲವರ್ಧನೆಗಾಗಿ ಜನರ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲು ಕ್ರಮ ವಹಿಸಲಾಗಿದೆ. ಜನರ ಅನುಕೂಲಕ್ಕಾಗಿ ಸಾರಿಗೆ ವ್ಯವಸ್ಥೆ ಹಾಗೂ ನೂತನ ವಿಶೇಷ ರೈಲನ್ನು ಆರಂಭಿಸಲಾಗಿದೆ ಎಂದು ತಿಳಿಸಲಾಯಿತು.

ಇದಕ್ಕಾಗಿ ಶ್ರಮಸಿದ ಉತ್ತರ ಕರ್ನಾಟಕ ಪ್ರವಾಸಿ ಪ್ರಕೋಶದ ಅಧ್ಯಕ್ಷ ಭರತ್ ಜೈನ್, ಉತ್ತರ ಕರ್ನಾಟಕ ಉಪಾಧ್ಯಕ್ಷ ಸುರೇಶ್ ಸಿ. ಜೈನ್ ಅವರಿಗೆ ರೈಲ್ವೆ ಸಚಿವಾಲಯ ಮತ್ತು ಎನ್ಆರ್ಯುಸಿಸಿ ಸದಸ್ಯರು ಕೃತಜ್ಞತೆ ಸಲ್ಲಿಸಿದರು.

ಪ್ರಕೋಶದ ಹುಬ್ಬಳ್ಳಿ-& ಧಾರವಾಡ ಜಿಲ್ಲಾಧ್ಯಕ್ಷ ದದಾರಾಮ ಚೌಧರಿ, ಉಪಾಧ್ಯಕ್ಷ ಬಾಬುಲಾಲ್ ಸವಿರ್, ರಿದ್ಮಲ್ ಸಿಂಗ್ ಸೋಲಂಕಿ, ಕಾರ್ಯದಶಿರ್ ಮುಲಾರಾಮ್ ದೇವಸಿ, ಶಿವಾನಸಿ ಜೈನ್ ಸಂಘ ಅಧ್ಯಕ್ಷ ಮಹಾವೀರ ಜೈನ್, ಅಂಜನಾ ಪಟೇಲ್, ಸಮಾಜದ ಪರ್ಬತ್ಸಿಂಗ್ ಖಿಚಿ, ಪಿರಾರಾರಂ, ಮುಲಾರಾಮ್, ರಾಜಪುರೋಹಿತ ಸಮಾಜದ ಸವಲಾರಾಮ್, ತಾಂಬರಂ ಚೌಧರಿ, ರಾಜಪುರೋಹಿತ ಸಮಾಜ, ದೇವಸಿ ಸಮಾಜದ ಕೆ. ಜಮ್ತಾರಾಮ, ಅಮರಾರಾಮ, ದಜಿರ್ ಸೊಸೈಟಿ ಅಧ್ಯಕ್ಷ ಅನೋಪಿ, ಉತ್ತರ ಕರ್ನಾಟಕದ ಯುವ ಅಧ್ಯಕ್ಷ ರಾಮ್ ಪರೀಕ್, ಮೋಹನ ದೇವಸಿ, ಸಮಾಜದ ಗಣ್ಯರು ಉಪಸ್ಥಿತರಿದ್ದರು. ಕಿಶೋರ್ ಪಟೇಲ್ ವಂದಿಸಿದರು.