ಹುಮನಾಬಾದ್: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನೂತನ ಸಹಾಯಕ ಆಯುಕ್ತರು ಉತ್ತಮ ಆಡಳಿತ ನೀಡಿ ಜನೋಪಕಾರಿ ಕೆಲಸ ಮಾಡುವಂತೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಸಲಹೆ ನೀಡಿದರು. ಪಟ್ಟಣದ ನಿವಾಸದಲ್ಲಿ ಭಾನುವಾರ ಬಸವಕಲ್ಯಾಣ ನೂತನ ಸಹಾಯಕ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಪ್ರಕಾಶ ಕುದ್ರಿ ಅವರು ಭೇಟಿಯಾಗಿ ಸನ್ಮಾನಿಸಿದ ಗೌರವಿಸಿದ ಸಂದರ್ಭದಲ್ಲಿ, ಮಾತನಾ, ಉತ್ತಮ ರೀತಿಯಿಂದ ಕೆಲಸ ನಿರ್ವಹಿಸಿಕೊಂಡು ಹೋಗುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲರಿಗೂ ನೂತನ ಆಯುಕ್ತರು ಹೂಗುಚ್ಛ ನೀಡಿ ಸನ್ಮಾನಿಸಿ ಗೌರವಿಸಿದರು. ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ್, ಟಿಎಪಿಸಿಎಮ್ ಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್ ಸೇರಿದಂತೆ ಹಲವಾರು ಪ್ರಮುಖರು ಇದ್ದರು.