rajagatta panchayti 
ಜಿಲ್ಲೆ

ಐತಿಹಾಸಿಕ ರಾಜಘಟ್ಟಕ್ಕೆ ಅನೈರ್ಮಲ್ಯ ಶಾಪ

ಶಿವರಾಜ.ಎಂ

ಸ್ವಚ್ಛತೆ ಮರೆತ ಪಂಚಾಯಿತಿ

ಸ್ಮಶಾನ ಜಾಗ ಒತ್ತುವರಿ ಜಟಾಪಟಿ ತಮಟೆ

  • ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
    ಸಾವಿರಾರು ವರ್ಷಗಳ ಇತಿಹಾಸವಿರುವ, ಹಿಂದೆ ಬೌದ್ಧರ ನೆಲೆಯಾಗಿದ್ದ, ದೇವಮೂಲೆ ಖ್ಯಾತಿಯ ಪುರಾತನ ಆಂಜನೇಯ ದೇಗುಲವಿರುವ ರಾಜಘಟ್ಟ ಗ್ರಾಮಕ್ಕೆ ಕೊಳಕಿನಘಟ್ಟ ಎಂಬ ಅಪಖ್ಯಾತಿ ಮೆತ್ತಿಕೊಳ್ಳಲಾರಂಭಿಸಿದೆ. ಅನೈರ್ಮಲ್ಯ ಶಾಪಕ್ಕೆ ತುತ್ತಾಗಿರುವ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
    ಕಸಬಾ ಹೋಬಳಿ ವ್ಯಾಪ್ತಿಯ ರಾಜಘಟ್ಟ ಹೋಬಳಿ ಕೇಂದ್ರವಾಗಿದ್ದು, ಈ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿಯಲ್ಲಿ ಕಸ-ಕಡ್ಡಿ ತುಂಬಿ ಗಬ್ಬುನಾರುತ್ತಿದೆ. ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದೆ. ಸೊಳ್ಳೆ-ನೊಣಗಳ ಕಾಟಕ್ಕೆ ಗ್ರಾಮಸ್ಥರು ಹೈರಾಣಾಗಿದ್ದಾರೆ. ಕಸ ವಿಲೇವಾರಿ ನಿರ್ಲಕ್ಷ್ಯದಿಂದ ಎಲ್ಲೆಂದರಲ್ಲಿ ಕಸದ ಬ್ಲ್ಯಾಕ್‌ಸ್ಪಾಟ್‌ಗಳು ರಾಜಘಟ್ಟದ ಖ್ಯಾತಿಗೆ ಕಸ ಮೆತ್ತುತ್ತಿವೆ. ಇದರೊಂದಿಗೆ ಸ್ಮಶಾನ ಜಾಗ ಒತ್ತುವರಿ ಗ್ರಾಮದಲ್ಲಿ ಜ್ವಲಂತ ಸಮಸ್ಯೆಯಾಗಿ ಬಿಗಡಾಯಿಸಿದ್ದು, ಶವಸಂಸ್ಕಾರಕ್ಕೆ ಗ್ರಾಮಸ್ಥರು ಪರದಾಡುವಂತಾಗಿದೆ.

ಡಂಗೂರ ಸಾರಿ ಅರಿವು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡದ ಪಂಚಾಯಿತಿ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಗ್ರಾಮದ ಕೊಳಕಿನ ಬಗ್ಗೆ ಧ್ವನಿ ಎತ್ತಿರುವ ಯುವಕರ ತಂಡ ತಮಟೆ ಬಾರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಟೆ ಹೊಡೆದು ಡಂಗೂರ ಸಾರುವ ಮೂಲಕ ಗ್ರಾಮಸ್ಥರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಗ್ರಾಪಂ ಎಚ್ಚೆತ್ತುಕೊಳ್ಳುವಂತೆ ಎಚ್ಚರಿಕೆ ರವಾನಿಸುತ್ತಿದ್ದಾರೆ.

ಪಂಚಾಯಿತಿಗೆ ಮುತ್ತಿಗೆ: ಗ್ರಾಮದ ಅಭಿವೃದ್ಧಿ ಕುರಿತು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಗ್ರಾಮಸ್ಥರು ನರಳುವಂಥಾಗಿದೆ. ಸ್ವಚ್ಛತೆ ಕುರಿತು ಪ್ರಶ್ನಿಸುವ ಗ್ರಾಮಸ್ಥರಿಗೆ ಸ್ಪಂದಿಸದ ಪಂಚಾಯಿತಿ ನಮಗೆ ಬೇಕಿಲ್ಲ. ಒಂದು ವಾರ ಕಾಲಾವಕಾಶ ನೀಡುತ್ತಿದ್ದು, ಸಮಸ್ಯೆ ಬಗೆಹರಿಸದಿದ್ದರೆ ಗ್ರಾಮದ ಮಹಿಳೆಯರು ಮಕ್ಕಳನ್ನು ಒಳಗೊಂಡಂತೆ ಗ್ರಾಮಸ್ಥರಿಂದ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಯುವಕರ ತಂಡ ಎಚ್ಚರಿಕೆ ನೀಡಿದೆ.