ಬಂಟ್ವಾಳ: ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಸಹಾಯ ಮಾಡಬೇಕೆಂಬ ಆಶಯವನ್ನು ದಿ.ರಾಜ ಪಲ್ಲಮಜಲು ಹೊಂದಿದ್ದರು, ಜಾತಿ, ಧರ್ಮ, ಭಾಷೆ ಮೀರಿ ಮಾನವರಾಗಿ ಬದುಕಬೇಕೆನ್ನುವ ಕಲ್ಪನೆಯೊಂದಿಗೆ ಬದುಕಿದ ರಾಜ ಪಲ್ಲಮಜಲು ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು. ಇಂದು ಅವರ ಮಕ್ಕಳು ತಂದೆಯ ಹಾದಿಯಲ್ಲಿಯೇ ಮುನ್ನಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಸ್ಮಾರ್ಟ್‌ಗೈಸ್ ಕೈಕಂಬ, ಬಿ.ಸಿ.ರೋಡು ಮತ್ತು ಬಂಟ್ವಾಳ ಅಂಬೇಡ್ಕರ್‌ಯುವ ವೇದಿಕೆ ಆಶ್ರಯದಲ್ಲಿ ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಸಮಾಜಮುಖಿ ಚಿಂತಕ, ಅಂಬೇಡ್ಕರ್‌ವಾದಿ ದಿ.ರಾಜ ಪಲ್ಲಮಜಲು ಅವರ 3ನೇ ವರ್ಷದ ಸ್ಮರಣಾರ್ಥ ನುಡಿನಮನ, ಪ್ರತಿಭಾ ಪುರಸ್ಕಾರ ಹಾಗೂ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಬಿ.ಸಿ. ರೋಡಿನಲ್ಲಿ ಉದ್ಘಾಟಿಸಿ ಮಾತನಾಡಿದರು.
ಸ್ಮಾರ್ಟ್‌ಗೈಸ್ ಕೈಕಂಬದ ಅಧ್ಯಕ್ಷ ಪ್ರೀತಿರಾಜ್ ದ್ರಾವಿಡ್ ಅಧ್ಯಕ್ಷತೆ ವಹಿಸಿದ್ದರು. ವಕೀಲೆ ಶೈಲಜಾ ರಾಜೇಶ್ ಮುಖ್ಯ ಅತಿಥಿಯಾಗಿದ್ದರು. ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಬೇಬಿ ಕುಂದರ್, ವೇಣೂರು ಪೊಲೀಸ್ ಠಾಣೆಯ ಎಎಸೈ ಲೋಕೇಶ್ ಮೊಡಂಕಾಪು, ಪಿಡಬ್ಲ್ಯುಡಿ ಗುತ್ತಿಗೆದಾರ ಅಶೋಕ್ ಕುಮಾರ್ ಭಂಡಾರಿಬೆಟ್ಟು, ಬಂಟ್ವಾಳ ತಾಲೂಕು ಮರಾಟಿ ಸೇವಾ ಸಂಘದ ಸಂಚಾಲಕ ಕೇಶವ ನಾಯ್ಕ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಸ್ಪರ್ಶಾ ಕಲಾ ಮಂದಿರದ ಮಾಲೀಕ ಸುಭಾಶ್ಚಂದ್ರ ಜೈನ್, ಪುಟ್ಟರಂಗನಾಥ್, ಪ್ರಮುಖರಾದ ಸೇಸಪ್ಪ ಮಾಸ್ಟರ್, ಬಾಬು ಮಾಸ್ಟರ್, ಶ್ರೀನಿವಾಸ್ ಮಿಜಾರ್, ಶೇಖರ್, ಶಶಿ ಕುಮಾರ್, ಹೊನ್ನಪ್ಪ ಕುಂದರ್, ವೆಂಕಣ್ಣ ಕಯ್ಯೂರು, ಶ್ರೀನಿವಾಸ ಅರ್ಬಿಗುಡ್ಡೆ , ಗೌರವಾಧ್ಯಕ್ಷ ಮೋಹನ್ ಬಡಗಬೆಳ್ಳೂರು, ಕಾರ್ಯದರ್ಶಿ ಪ್ರೇಮರಾಜ್ ದ್ರಾವಿಡ್, ಜೊತೆಕಾರ್ಯದರ್ಶಿಗಳಾದ ಪೂರ್ಣೇಶ್ ಕೊಯ್ಯುರು, ಸಂಪತ್ ಕಕ್ಕೆಪದವು, ಕೋಶಾಧಿಕಾರಿ ಪುಷ್ಪರಾಜ್ ದ್ರಾವಿಡ್, ಕ್ರೀಡಾ ಕಾರ್ಯದರ್ಶಿಗಳಾದ ಮಂಜುನಾಥ ಉರ್ವಸ್ಟೋರ್, ಸಂಪತ್ ವಗ್ಗ, ಶಿವಪ್ರಸಾದ್ ನಿಡುವಾಳೆ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಅನುರಾಧ ಮಿಜಾರ್. ಪುನೀತ್‌ರಾಜ್ ದ್ರಾವಿಡ್, ಪ್ರಶಾಂತ್ ಕಂಕನಾಡಿ ಉಪಸ್ಥಿತರಿದ್ದರು.
ಸಂಘಟನೆಯ ಉಪಾಧ್ಯಕ್ಷ ವೆಂಕಟೇಶ್ ಕೃಷ್ಣಾಪುರ ಸ್ವಾಗತಿಸಿದರು. ಪೂರ್ಣಿಮ ಪುಸ್ತಕ ಪರಿಚಯಿಸಿದರು. ಪ್ರವೀಣ್‌ಸೂರ್ಯ ಹೊಸಂಗಡಿ ವಂದಿಸಿದರು. ಚಂದ್ರಪ್ಪ ಮಾಸ್ಟರ್ ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು.
ರಾಜ ಪಲ್ಲಮಜಲು ಅವರ ಪುಸ್ತಕ ಬಿಡುಗಡೆಗೊಳಿಸಲಾಯಿತು. ಕೀಡಾ ಕ್ಷೇತ್ರದ ಸಾಧಕರಾದ ಸೃಜನ್ ಕೃಷ್ಣಪುರ, ಕಿಶನ್ ದ್ರಾವಿಡ್, ನಳಿನಾಕ್ಷಿ, ಪ್ರೀತಂ ಶಾಶ್ವತ್‌ರಾಜ್ ಅವರನ್ನು ಸನ್ಮಾನಿಸಲಾಯಿತು.