ಜಿಲ್ಲೆ

ಎಸ್.ಪಿಯವರೇ ರೈತರ ಬೆಳೆ ರಕ್ಷಣೆ ಮಾಡಲಿ - ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಒತ್ತಾಯ

Mangaluru - Nishantha Narayana

ಪುತ್ತೂರು: ಕೃಷಿಕರ ಕೋವಿ ಪರವಾನಗಿ ನವೀಕರಣಕ್ಕೆ ಇಲ್ಲಸಲ್ಲದ ಕಾನೂನು ತರುತ್ತಿರುವುದು ಸರಿಯಲ್ಲ. ಸಮಸ್ಯೆ ಮುಂದುವರಿಸಿದರೆ ದ.ಕ ಜಿಲ್ಲೆಯ ರೈತ ಸಂಘಟನೆಗಳನ್ನು ಸೇರಿಸಿಕೊಂಡು ಡಿ.ಸಿ. ಹಾಗೂ ಎಸ್.ಪಿ. ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಎಚ್ಚರಿಸಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರು ತಮ್ಮದೇ ಕಾನೂನು, ತಾವೇ ಶ್ರೇಷ್ಠರೆಂದು ದಿನಕ್ಕೊಂದು ಕಾನೂನು ಮಾಡುತ್ತಿದ್ದಾರೆ. ಸರ್ಕಾರ ಕೊಟ್ಟ ಕಾನೂನು ಪಾಲನೆಯಾಗುತ್ತಿಲ್ಲ. ಕೋವಿ ನವೀಕರಣ ಸಮಯದಲ್ಲಿ ಅರಣ್ಯ ಇಲಾಖೆಯಿಂದ ಮೃಗಗಳು ಹಾವಳಿ ಮಾಡುತ್ತಿರುವ ಬಗ್ಗೆ ೫ ವರ್ಷದ ದೃಢೀಕರಣ ಪತ್ರ ನೀಡಬೇಕೆಂದು ಹೇಳುತ್ತಿರುವುದು ಹುಚ್ಚುತನ. ಕೃಷಿಕರ ಜಮೀನಿಗೆ ಕಾಡು ಪ್ರಾಣಿಗಳು ಬಂದಾಗ ಓಡಿಸಲು ಎಸ್.ಪಿ.ಗೆ ಕರೆ ಮಾಡುತ್ತೇವೆ. ಅವರು ಮತ್ತು ಪೊಲೀಸರು ಬಂದು ಬೆಳೆ ರಕ್ಷಣೆ ಮಾಡಬೇಕು. ಇದನ್ನು ಮಾಡಲು ಸಾಧ್ಯವಿಲ್ಲವಾದರೆ, ಮೊದಲು ಯಾವ ರೀತಿಯಲ್ಲಿ ಕೋವಿ ನವೀಕರಣವಾಗುತ್ತಿತ್ತೋ ಅದೇ ರೀತಿಯಲ್ಲಿ ಮುಂದುವರಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.