ಜಿಲ್ಲೆ

ಸಂಘಟಿತರಾಗಿ ಸರ್ಕಾರದ ಸವಲತ್ತು ಪಡೆಯಿರಿ

Mysuru - Desk - Yashavanth Kumar N

ಹನೂರು: ಪ್ರತಿಯೊಬ್ಬರೂ ಸಂಘಟಿತರಾಗುವುದರ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ತಿಳಿಸಿದರು.
ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏರಿಕಾಡು ಗ್ರಾಮದಲ್ಲಿ ಮಂಗಳವಾರ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷೃದಿಂದ ಗ್ರಾಮಗಳು ಸೌಕರ್ಯವಂಚಿತವಾಗಿವೆ. ಜನರು ಕಷ್ಟದ ನಡುವೆ ಜೀವನ ಸಾಗಿಸುವಂತಾಗಿದೆ. ಇದರಿಂದ ಮುಕ್ತಿ ಹೊಂದಬೇಕಾದರೆ ಪ್ರತಿಯೊಬ್ಬರೂ ಸಂಘಟಿತರಾಗಬೇಕು. ಇದಕ್ಕಾಗಿ ರೈತ ಸಂಘವನ್ನು ಉದ್ಘಾಟಿಸಲಾಗುತ್ತಿದೆ. ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಇದೇ ವೇಳೆ ಗ್ರಾಮ ಘಟಕಕ್ಕೆ ದ್ರಾವಿಡ್ (ಗೌರವ ಅಧ್ಯಕ್ಷ), ಡೇವಿಡ್ ಅಂತೋಣಿ (ಅಧ್ಯಕ್ಷ), ಮರಿಯಾ ಜೋಸೆಫ್(ಉಪಾಧ್ಯಕ್ಷ), ಅರುಣ್‌ಕುಮಾರ್ (ಕಾರ್ಯದರ್ಶಿ) ಅವರನ್ನು ಆಯ್ಕೆ ಮಾಡಲಾಯಿತು. ತಾಲೂಕು ಘಟಕದ ಅಧ್ಯಕ್ಷ ಅಮ್ಜಾದ್‌ಖಾನ್, ಗೌರವಾಧ್ಯಕ್ಷ ರಾಜೇಂದ್ರ, ಕೊಳ್ಳೇಗಾಲ ಘಟಕದ ಶಿವಮಲ್ಲು, ರೈತ ಮುಖಂಡರಾದ ಅರ್ಪುದರಾಜ್, ಕಾಶಿಗೌಡ, ಪುಟ್ಟಣ್ಣ, ನಾಗರಾಜು, ಜೋಸೆಫ್ ಇನ್ನಿತರರು ಇದ್ದರು.