ಜಿಲ್ಲೆ

ರೈತರಿಗೆ ಸವಲತ್ತುಗಳ ವಿತರಣೆ

ಸುನಿಲ್ ಪೊನ್ನೇಟಿ

ಸೋಮವಾರಪೇಟೆ:

ತಾಲೂಕು ಕೃಷಿ ಇಲಾಖೆ ವತಿಯಿಂದ ರೈತ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯ ಕಛೇರಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ.ಮಂತರ್ ಗೌಡ ಮಾತನಾಡಿ,ಜಿಲ್ಲೆಯ ರೈತರ ನೈಜ ಸಮಸ್ಯೆಗಳ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆಂಬ ಭರವಸೆ ನೀಡಿದರು.

ಸರಕಾರದ ಯೋಜನೆಗಳು ಪ್ರತಿಯೋರ್ವ ಅರ್ಹ ಫಲಾನುಭವಿಗಳಿಗೆ ತಲುಪುವಂತಾಗಬೇಕೆಂದರು.ಇದೇ ಸಂದರ್ಭ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ್‌ಬಾಬು ಮತ್ತಿತರರು ಇದ್ದರು.ರೈತ ಫಲಾನುಭವಿಗಳಿಗೆ ಟಾರ್ಪಲ್ ವಿತರಿಸಲಾಯಿತು.