ರೈತ ಸಂಘದ ಕೇಂದ್ರ ಕಚೇರಿಯಲ್ಲಿ ಬ್ಯಾಂಕಿಂಗ್ ಸವಲತ್ತು ಮಾಹಿತಿ ಕಾರ್ಯಾಗಾರದಲ್ಲಿ ಗೀತಾ ಯಶೋಧರ್ ಮಾತನಾಡಿದರು. ಗೀತಾ ವಿಜಯ್, ಹರೀಶ್ ನಾಯಕ್, ನಿಮೇಶ್, ಹರಿಕೃಷ್ಣ ಇತರರಿದ್ದರು.
- ಲೀಡ್ ಬ್ಯಾಂಕ್ ಮ್ಯಾನೇಜರ್ ಗೀತಾ ಯಶೋಧರ ಅಭಿಮತ
ಪುತ್ತೂರು: ದೇಶದಲ್ಲಿ ಕೃಷಿ ಕ್ಷೇತ್ರವು ಅಭಿವೃದ್ಧಿಯ ಹೆಸರಿನಲ್ಲಿ ಹಿಂದೆ ಬೀಳುತ್ತಿದೆ. ರೈತರು ಸರ್ಕಾರಿ ಇಲಾಖೆಗಳು ನೀಡುವ ಸವಲತ್ತುಗಳನ್ನು ಗರಿಷ್ಠವಾಗಿ ಬಳಸಿಕೊಳ್ಳಬೇಕು ಮತ್ತು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಜನಪ್ರತಿನಿ˜ಗಳ ಮೇಲೆ ಒತ್ತಡ ಹೇರಬೇಕು. ಭೂಮಿಯ ಫಲವತ್ತತೆ ಹೆಚ್ಚಿಸಲು ಹಾಗೂ ನೀರಿನ ಉಳಿತಾಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಗೀತಾ ಯಶೋಧರ್ ಹೇಳಿದರು.
ಎಸ್‌ಕೆಎಎಂಎಸ್ ಕಟ್ಟಡದಲ್ಲಿರುವ ರೈತಸಂಘದ ಕೇಂದ್ರ ಕಚೇರಿಯಲ್ಲಿ ಬ್ಯಾಂಕಿಂಗ್ ಸವಲತ್ತು ಸಹಿತ ವಿವಿಧ ವಿಷಯಗಳ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಆರ್ಥಿಕ ಸಾಕ್ಷರತಾ ಕೇಂದ್ರದ ಗೀತಾ ವಿಜಯ್ ಮಾತನಾಡಿ, ಮನೆಯವರಿಗಾಗಿ ವಿಮೆ ಮಾಡಿಸುವುದು ಉತ್ತಮ. ಅಟಲ್ ಪಿಂಚಣಿ ಯೊಜನೆ ಮಾಡುವ ಮೂಲಕ ಕುಟುಂಬದವರಿಗೂ ಪಿಂಚಣಿ ಪಡೆಯಬಹುದು. ಸಾಮಾಜಿಕ ಭದ್ರತಾ ಯೋಜನೆಯನ್ನು ಪ್ರತಿಯೊಬ್ಬರೂ ಬಳಸಿಕೊಳ್ಳಬೇಕು. ಪಿಎಂ ಕಿಸಾನ್ ಪಡೆಯುವ ಪ್ರತಿಯೊಬ್ಬರೂ ನೋಂದಾಯಿಸಿಕೊಳ್ಳಬೇಕಿದ್ದು, ಗ್ರಾಮಸಭೆಗಳಲ್ಲಿ ಈ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಬ್ಯಾಂಕ್ ಅಧಿಕಾರಿಗಳಾದ ಹರೀಶ್ ನಾಯಕ್, ನಿಮೇಶ್, ಹರಿಕೃಷ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಮಾರ್ಗದರ್ಶಕ ಮುರುವ ಮಹಾಬಲ ಭಟ್, ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ, ಪ್ರಮುಖರಾದ ಶಿವಣ್ಣ ಗೌಡ, ಹರ್ಷಕುಮಾರ್ ಹೆಗ್ಡೆ, ರಾಜೀವ ಗೌಡ, ಹರಿಣಾಕ್ಷಿ, ಗೀತಾ, ನಾರಾಯಣ ಗೌಡ, ಶಿವಚಂದ್ರ ಇದ್ದರು.