ಯಡ್ರಾಮಿಯಲ್ಲಿ ಜಾಗೃತಿ ಸಮಾವೇಶ
ವಿಜಯವಾಣಿ ಸುದ್ದಿಜಾಲ ಯಡ್ರಾಮಿ
ದೇಶದಲ್ಲಿರುವ ಪ್ರತಿಯೊಬ್ಬರೂ ರೈತರನ್ನು ಅವಲಂಬಿಸಿz್ದೆÃವೆ. ಆದರೆ ರೈತ ಅಗತ್ಯ ಸೌಲಭ್ಯ ಹಾಗೂ ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರಕದೆ ಸಂಕಷ್ಟ ಅನುಭವಿಸುತ್ತಿದ್ದಾನೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಕಳವಳ ವ್ಯಕ್ತಪಡಿಸಿದರು.
ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ತಾಲೂಕು ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ರೈತ ಜಾಗೃತಿ ಬೃಹತ್ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಶಾಲು ದೀಕ್ಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತಪರ ಸಂಘಟನೆಗಳು ಅನ್ನದಾತರಿಗೆ ಆಧುನಿಕ ಕೃಷಿ, ತಂತ್ರಜ್ಞಾನ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಎಲ್ಲ ಸಮಯದಲ್ಲೂ ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸದ್ಯದ ಪರಿಸ್ಥಿತಿಯಲ್ಲಿ ಯುವಕರು ಕೃಷಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಇಳುವರಿ ದೊರೆಯದಿರುವುದು ಒಂದೆಡೆಯಾದರೆ, ಯುವ ರೈತರು ಅಸಡ್ಡೆಯಾಗಿ ನೋಡುವುದು ಮತ್ತೊಂದು ಕಾರಣವಾಗಿದೆ. ಅಲ್ಲದೆ ಸರ್ಕಾರಿ ನೌಕರಿ ಹಾಗೂ ಉನ್ನತ ಹುದ್ದೆಯಲ್ಲಿದ್ದವರಿಗೆ ಮಾತ್ರ ಹೆಣ್ಣು ಕೊಟ್ಟು ಮದುವೆ ಮಾಡುವ ಪರಿಪಾಠ ಬೆಳೆಯುತ್ತಿದೆ. ಇದರಿಂದಾಗಿ ಯುವಕರು ಕೃಷಿಯಿಂದ ದೂರವಾಗಿ ಸಿಟಿ ಸೇರುತ್ತಿದ್ದಾರೆ. ಹೀಗೆ ಮುಂದುವರೆದರೆ ದೇಶದ ಕೃಷಿ ಪದ್ಧತಿಗೆ ದೊಡ್ಡ ನಷ್ಟ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಕಡಕೋಳ ಮಹಾಮಠದ ಶ್ರೀ ಡಾ.ರುದ್ರಮುನಿ ಶಿವಾಚಾರ್ಯರು, ಯಡ್ರಾಮಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶಹಾಪುರ ತಾಲೂಕಿನ ಮಹಲ್‌ರೋಜಾದ ಶ್ರೀ ಮಲ್ಲಿಕಾರ್ಜುನ ಮುತ್ಯಾ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ರಾಜಶೇಖರ ಸೀರಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ, ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಉಪಾಧ್ಯಕ್ಷ ಲಕ್ಷಿö್ಮÃಕಾಂತ ಪಾಟೀಲ್ ಮದ್ದರಕಿ, ತಾಲೂಕು ಅಧ್ಯಕ್ಷ ಮಾಳಿಂಗರಾಯ ಕಾರಗುಂಡ, ಪ್ರಮುಖರಾದ ಚಂದ್ರಶೇಖರ ಪುರಾಣಿಕ, ಬಸಲಿಂಗಪ್ಪ ಸಾಹು ಅಂಕಲಕೋಟಿ, ಮಲ್ಲಿಕಾರ್ಜುನ ಹಲಕರ್ಟಿ, ನಿಂಗನಗೌಡ ಪಾಟೀಲ್, ಇಬ್ರಾಹಿಂಸಾಬ್ ಉಸ್ತಾದ್, ಮಲ್ಹಾರಾವ್ ಕುಲಕರ್ಣಿ, ಕೆ.ವಿರೇಶ, ಶಿವನಾಗ ಕುಸ್ತಿ, ಮಲ್ಲಿಕಾರ್ಜುನ ಕುಳಗೇರಿ, ಶಂಕರಲಿAಗ ಕರಕಿಹಳ್ಳಿ, ಅಮರನಾಥ ಸಾಹು ಕುಳಗೇರಿ, ಶಫಿಉಲ್ಲಾ ಧಖನಿ ಇತರರಿದ್ದರು.
ಪದಾಧಿಕಾರಿಗಳು, ಹಿರಿಯ ರೈತರು, ಸಾಧಕ ಶಿಕ್ಷಕರು, ಸಮಾಜ ಸೇವಕರು, ಉದ್ಯಮಿಗಳು ವಿವಿಧ ಕ್ಷೇತ್ರದ ಪ್ರಮುಖರನ್ನು ಸತ್ಕರಿಸಲಾಯಿತು.