ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಸಂಸದರು ಧ್ವನಿ ಎತ್ತಬೇಕು ಎಂದು ಒತ್ತಾಯಿಸಿ ರಾಯಚೂರಿನ ಸಂಸದ ರಾಜಾ ಅಮರೇಶ್ವರ ನಾಯಕ ಆಪ್ತ ಕಾರ್ಯದರ್ಶಿ ಶ್ರೀನಿವಾಸಗೆ ಸಿಪಿಐನಿಂದ ಸೋಮವಾರ ಮನವಿ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಚಂದ್ರಕಾಂತ ಕ್ಯಾತ್ನಟ್ಟಿ, ಪದಾಕಾರಿಗಳಾದ ಬಾಷುಮಿಯಾ, ಎಸ್.ಎಂ.ಪೀರ, ಡಿ.ಎಚ್.ಕಂಬಳಿ, ವೆಂಕೋಬ, ಆನಂದ, ಸಿದ್ದರಾಮಯ್ಯ ಸ್ವಾಮಿ, ಸಂಗಯ್ಯ ಸ್ವಾಮಿ, ಜಗದೀಶ, ಹುಸೇನ್, ದುರುಗಪ್ಪ, ಈರಣ್ಣ, ಬಸವರಾಜ, ಪದ್ಮಜಾ ಇದ್ದರು. 
ಜಿಲ್ಲೆ

ರಾಜ್ಯಕ್ಕಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿ

ರಾಯಚೂರು: ರಾಜ್ಯಕ್ಕೆ ತೆರಿಗೆ ವಿಷಯದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ರಾಜ್ಯದ ಸಂಸದರು ಸಂಸತ್ತಿ ಧ್ವನಿ ಎತ್ತುವ ಮೂಲಕ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ಕೊಡುವಂತೆ ಮಾಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಸಂಸದ ರಾಜಾ ಅಮರೇಶ್ವರ ನಾಯಕ ಕಚೇರಿ ಮುಂದೆ ಸಿಪಿಐನಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಸಂಸದರ ಆಪ್ತ ಕಾರ್ಯದರ್ಶಿ ಶ್ರೀನಿವಾಸಗೆ ಮನವಿ ಸಲ್ಲಿಸಿ, ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದರೂ ರಾಜ್ಯದ ಸಂಸದರು ಈ ಬಗ್ಗೆ ಧ್ವನಿ ಎತ್ತದೆ ಕುಳಿತಿರುವುದು ಸರಿಯಲ್ಲ. ಕೂಡಲೇ ರಾಜ್ಯದ ಪಾಲು ದಕ್ಕುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಕಳೆದ 4 ವರ್ಷಗಳಿಂದ ಅನ್ಯಾಯವಾಗುತ್ತಿದ್ದು, ಸುಮಾರು 45 ಸಾವಿರ ಕೋಟಿ ರೂ. ನಷ್ಟವಾಗಿದೆ. ಮುಖ್ಯಮಂತ್ರಿಗಳು ಅಂಕಿ ಅಂಶಗಳನ್ನು ಬಹಿರಂಗ ಪಡಿಸಿದ್ದು, ಕೇಂದ್ರ ಸರ್ಕಾರದ ತಾರತಮ್ಯ ನೀತಿ ವಿರುದ್ಧ ಎಲ್ಲ ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತಲೂ ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಚಂದ್ರಕಾಂತ ಕ್ಯಾತ್ನಟ್ಟಿ, ಪದಾಕಾರಿಗಳಾದ ಬಾಷುಮಿಯಾ, ಎಸ್.ಎಂ.ಪೀರ, ಡಿ.ಎಚ್.ಕಂಬಳಿ, ವೆಂಕೋಬ, ಆನಂದ, ಸಿದ್ದರಾಮಯ್ಯ ಸ್ವಾಮಿ, ಸಂಗಯ್ಯ ಸ್ವಾಮಿ, ಜಗದೀಶ, ಹುಸೇನ್, ದುರುಗಪ್ಪ, ಈರಣ್ಣ, ಬಸವರಾಜ, ಪದ್ಮಜಾ ಪಾಲ್ಗೊಂಡಿದ್ದರು.