- ವಿಜಯವಾಣಿ ಸುದ್ದಿಜಾಲ ಮಂಗಳೂರು
- ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕರು ಸುರಕ್ಷತೆಯ ದೃಷ್ಟಿಯಿಂದ ಕೆಲವು ಮುಂಜಾಗರೂಕತಾ ಕ್ರಮಗಳನ್ನು ಪಾಲಿಸುವಂತೆ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಸಲಹೆ ನೀಡಿದೆ.
- ಏನು ಮಾಡಬಾರದು ?
ಪ್ರಸ್ತುತ ಮುಂಗಾರು ಅವಧಿಯಲ್ಲಿ ಮಳೆ, ಗಾಳಿ, ಗುಡುಗು, ಮಿಂಚು ಹೆಚ್ಚಾಗಿ ಬರುವ ಸಂಭವವಿರುವ ಕಾರಣ ಸಾರ್ವಜನಿಕರು ತುಂಡಾಗಿ ಬಿದ್ದಿರುವ ವಿದ್ಯುತ್ ಲೈನ್‌ಗಳನ್ನು, ವಿದ್ಯುತ್ ಕಂಬ ಹಾಗೂ ಇತರ ವಿದ್ಯುತ್ ಉಪಕರಣಗಳನ್ನು ಮುಟ್ಟಬಾರದು. ಜಾನುವಾರುಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟುವುದಾಗಲೀ, ಬಟ್ಟೆ ಒಣಗಲು ವಿದ್ಯುತ್ ಕಂಪನಿಯ ಸಾಮಗ್ರಿಗಳನ್ನು ಬಳಸುವುದಾಗಲೀ ಮಾಡಬಾರದು ಎಂದು ಮೆಸ್ಕಾಂ ಸಲಹೆ ನೀಡಿದೆ.
- ಏನು ಮಾಡಬೇಕು?
ವಿದ್ಯುತ್ ಅವಘಡದ ಬಗ್ಗೆ ಮುನ್ಸೂಚನೆ ಕಂಡು ಬಂದಲ್ಲಿ ತಕ್ಷಣ 24x7 ಗ್ರಾಹಕ ಸೇವಾ ಕೇಂದ್ರದ ಸಂಖ್ಯೆ 1912 ಯಲ್ಲಿ ದೂರು ದಾಖಲಿಸಬಹುದು ಅಥವಾ ಗ್ರಾಹಕ ಸೇವಾ ಕೇಂದ್ರದ ವಾಟ್ಸಪ್ ನಂಬರ್ 9483041912 ಗೆ ಸಂದೇಶ ಕಳುಹಿಸಬೇಕು. ‘ನನ್ನ ಮೆಸ್ಕಾಂ’ ಆ್ಯಪ್ ಮೂಲಕ ಕೂಡ ಮಾಹಿತಿ ನೀಡಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಅತೀ ತುರ್ತು ಸಂದರ್ಭಉಪವಿಭಾಗಗಳ 24x7 ಸೇವಾ ಕೇಂದ್ರಗಳಲ್ಲಿ ದೂರು ದಾಖಲಿಸಬೇಕು.
- ತುರ್ತು ಸಂಪರ್ಕಕ್ಕೆ ಮೆಸ್ಕಾಂ 24್ಡ7 ಸೇವಾ ಕೇಂದ್ರದ ಹೆಸರು ಮತ್ತು ದೂರವಾಣಿ ಸಂಖ್ಯೆಗಳ ಮಾಹಿತಿ ಹೀಗಿದೆ:
- ಜೆಪ್ಪು 0824-2418066,
- ಮಲ್ಲಿಕಟ್ಟೆ 0824-2425599,
- ನೆಹರೂ ಮೈದಾನ 0824-2423127,
- ಮಣ್ಣಗುಡ್ಡ 0824-2456919
- ಕುಲಶೇಖರ 0824-2231039
- ವಾಮಂಜೂರು 0824-2263001
- ಉಳ್ಳಾಲ 0824-2466233
- ಕೋಣಾಜೆ 0824-2221912
- ಕಾವೂರು 0824-2481656, 0824-2482656
- ಬೈಕಂಪಾಡಿ 0824-2407756, 0824-2407757
- ಸುರತ್ಕಲ್ 0824-2475379
- ಮುಲ್ಕಿ 0824-2290537
- ಮೂಡುಬಿದಿರೆ 08258-236255
14 ಕೈಕಂಬ 0824-2258102