ಚಿಕ್ಕಬಳ್ಳಾಪುರ: ಜಡಿ ಮಳೆ, ಮೋಡ ಮುಸುಕಿದ ವಾತಾವರಣದ ನಡುವೆ ಮನೆಯಲ್ಲಿ ಕರೆಂಟ್ ಶಾಕ್ ಹೊಡೆದು, ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ಚಿಕ್ಕಬಳ್ಳಾಪುರ ತಾಲೂಕಿನ ಕುರ್ಲಹಳ್ಳಿಯ ಯಶ್ವಂತ್ (22) ಮೃತ. ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬಲ್ಬ್ ಉರಿಯುತ್ತಿರಲಿಲ್ಲ. ಇದಕ್ಕೆ ಸರಿಪಡಿಸುವ ಸಂದರ್ಭದಲ್ಲಿ ವೈರು ಕತ್ತರಿಸಿ ರಿಪೇರಿ ಮಾಡಲು ಹೋಗಿದ್ದು ಮಳೆಯ ನೀರಿನ ತೇವಾಂಶದ ನಡುವೆ ತಂತಿಯನ್ನು ಮುಟ್ಟಿದ ತಕ್ಷಣ ಕರೆಂಟ್ ಶಾಕ್ ಹೊಡೆದಿದೆ. ಇದಕ್ಕೆ ಪ್ರಜ್ಞಾಹೀನನಾಗಿ ಕೆಳಕ್ಕೆ ಬಿದ್ದಿದ್ದ ಯಶ್ವಂತ್ ನನ್ನು ತಕ್ಷಣ ಸಂಬಂಧಿಕರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಇದು ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
*ಮೃತ ಸಂಬಂಧಿಕರ ಆಕ್ರಂದನ*
ಕುಟುಂಬದ ಏಕೈಕ ಮಗನನ್ನು ಕಳೆದುಕೊಂಡ ಮೃತನ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು. ಮನೆಯಲ್ಲಿ ಕರೆಂಟ್ ಶಾಕ್ ಹೊಡೆದು ಹುಡುಗ ಮೃತಪಟ್ಟಿರುವ ದುರ್ಘಟನೆಗೆ ಗ್ರಾಮಸ್ಥರು ಶಾಕ್ ಆಗಿದ್ದಾರೆ. ಜಡಿ ಮಳೆಯ ನಡುವೆ ಬೆಸ್ಕಾಂ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಅವಘಡಗಳನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.