ಬೆಟ್ಟದಪುರ; ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿದು ತಂಪೆರೆಯಿತು.
ಚಪ್ಪರದಹಳ್ಳಿ, ಗೊರಹಳ್ಳಿ, ಬೆಟ್ಟದಪುರ, ಈಚೂರು, ಸುರಗಳ್ಳಿ, ಹಲಗನಹಳ್ಳಿ, ಹಾರನಹಳ್ಳಿ, ಅಂಬಲಾರೆ, ರಾಜನಬಿಳಗೂಲಿ, ಹೊನ್ನಾಪುರ, ಅಡಗೂರು, ಚಿಕ್ಕನೇರಳೆ, ತರಿಕಲ್ಲು ಕಾಲನಿ, ಹಸುವಿನ ಕಾವಲು ಸೇರಿದಂತೆ ವ್ಯಾಪ್ತಿಯ ಗ್ರಾಮಗಳಲ್ಲಿ ಜೋರು ಮಳೆ ಸುರಿಯಿತು.
ಕಳೆದ ಹತ್ತಾರು ದಿನಗಳಿಂದ ಬಿಸಿಲಿನ ತಾಪ ಹೆಚ್ಚಾಗಿತ್ತು. ಸೋಮವಾರ ಸುರಿದ ಮಳೆಯಿಂದ ಭೂಮಿ ತಂಪಾಯಿತು. ಇದರಿಂದ ಕೃಷಿ ಚಟುವಟಿಕೆಯೂ ಗರಿಗೆದರಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ.