ಜಿಲ್ಲೆ

ಕೃಷಿ ಚಟುವಟಿಕೆ ಚುರಕು ನೀಡಿದ ಮಳೆ

ಜಿ.ಹೆಚ್. ಧನ್ಯಕುಮಾರ್

ತರೀಕೆರೆ: ಬಯಲು ಸೀಮೆಯಿಂದ ಆವೃತವಾಗಿರುವ ಅಜ್ಜಂಪುರ ತಾಲೂಕಿನಲ್ಲಿ ಹದ

ಮಳೆಯಾಗುತ್ತಿರುವುದರಿಂದ ಕಳೆದೆರಡು ತಿಂಗಳಿನಿಂದ ಕೃಷಿ ಕಾರ್ಯ ಚುರುಕುಗೊಂಡಿದೆ.

ಅಜ್ಜಂಪುರ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಪೂರ್ವ ಮುಂಗಾರು ಸಮಯದಿಂದಲೂ ಬಯಲುಸೀಮೆಯ ಹವಾಮಾನಕ್ಕೆ ತಕ್ಕಂತೆ ಬಿಟ್ಟು ಬಿಟ್ಟು ಬಿಸಿಲು ಮಳೆ ಸುರಿಯುತ್ತಿರುವುದರಿಂದ ರೈತರುಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ತನ್ನ ಅನುಕೂಲಕ್ಕೆ ಅನುಗುಣವಾದ ಬೆಳೆ ಬೆಳೆದುಹೆಚ್ಚಿನ ಆದಾಯ ಪಡೆದುಕೊಳ್ಳುವ ತವಕದಲ್ಲಿದ್ದಾನೆ.ಈರುಳ್ಳಿ, ಮೆಣಸಿನಕಾಯಿ, ರಾಗಿ, ಶೇಂಗಾ, ಕಡ್ಲೇ, ಹೆಸರು, ಉದ್ದು, ಅಲಸಂದೆ, ಜೋಳ ಸೇರಿಇನ್ನಿತರ ಏಕದಳ, ದ್ವಿದಳ ಧಾನ್ಯಗಳ ಉತ್ಪಾದನೆಗೆ ಹೇಳಿ ಮಾಡಿಸಿದ ವೈವಿಧ್ಯಮಯ ಗುಣವುಳ್ಳ

ಮಣ್ಣಿನಿಂದ ಕೂಡಿರುವ ಬಯಲು ಪ್ರದೇಶದಲ್ಲಿ ಇದೀಗ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆ ಲಗ್ಗೆಇಟ್ಟಿರುವುದು ಭವಿಷ್ಯದ ದಿನಗಳಲ್ಲಿ ಆಹಾರ ಧಾನ್ಯ ಉತ್ಪಾದನೆಗೆ ಹೊಡೆತ ಬೀಳುವ ಮುನ್ಸೂಚನೆನೀಡಿದೆ. ಇದರ ಹೊರತಾಗಿಯೂ ಬಗ್ಗವಳ್ಳಿ, ಚನ್ನಾಪುರ, ಶಿವನಿ, ಗಡಿರಂಗಾಪುರ, ತ್ಯಾಗದಕಟ್ಟೆ,ಅನುವನಹಳ್ಳಿ, ಇನ್ನಿತರ ಕಡೆ ಅನ್ನದಾತ ತನ್ನ ಮತ್ತು ತನ್ನವರ ಹೊಟ್ಟೆ ಮಾತ್ರವಲ್ಲ, ಅನ್ಯರತುತ್ತಿನ ಚೀಲ ತುಂಬಿಸಲು ಆಹಾರ ತಯಾರಿಕೆಗೆ ಬೇಕಾದ ರಾಗಿ, ಈರುಳ್ಳಿ, ಮೆಣಸಿನಕಾಯಿ,ಜೋಳಗಳಂಥ ಪದಾರ್ಥಗಳನ್ನು ಆದಷ್ಟು ಪ್ರಮಾಣದಲ್ಲಿ ಬೆಳೆಯಲು ಮುಂದಾಗುತ್ತಿರುವುದುಆಶಾದಾಯಕವಾಗಿದೆ.

ಅಜ್ಜಂಪುರ ತಾಲೂಕಿನ ಕಸಬಾ ಹಾಗೂ ಶಿವನಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿರುವ

25ಸಾವಿರಕ್ಕೂ ಹೆಚ್ಚು ಹೆಕ್ಟರ್‌ನಷ್ಟು ಕೃಷಿ ಭೂಮಿಯಲ್ಲಿ ಅಡಕೆ ಸಿಂಹಪಾಲನ್ನು ಹೊಂದಿದೆ.

ಬಿತ್ತನೆಯ ಗುರಿ ಹೊಂದಿರುವ 11ಸಾವಿರ ಹೆಕ್ಟರ್ ಭೂ ಪ್ರದೇಶದಲ್ಲಿ ಈಗಾಗಲೇ ಶೇಂಗಾ,

ಮೆಕ್ಕೆಜೋಳ, ಈರುಳ್ಳಿ, ಅಲ್ಲಿಲ್ಲಿ ರಾಗಿ, ತೊಗರಿ, ಅಲಸಂದೆ, ಉದ್ದು, ಹೆಸರು ಕಾಳುಗಳ

ಶೇ.50ರಷ್ಟು ಬಿತ್ತನೆ ಕಾರ್ಯ ಮುಗಿದಿದೆ.