ಕೂಡ್ಲಿಗಿಯಲ್ಲಿ ಎಡೆಬಿಡದೆ ಸುರಿದ ತುಂತುರು ಮಳೆಯಿಂದ ರೈತರು ಒಕ್ಕಣೆ ಮಾಡಿದ ಜೋಳ, ಮೆಕ್ಕೆಜೋಳ ಒಣಗಿಸಲು ಪರದಾಡುವಂತಾಯಿತು. 
ಜಿಲ್ಲೆ

ಜಡಿ ಮಳೆಗೆ ಕಪ್ಪಿಟ್ಟ ಜೋಳ: ಬೆಳೆ ನಷ್ಟದ ಆತಂಕದಲ್ಲಿ ಕೂಡ್ಲಿಗಿ ತಾಲೂಕಿನ ರೈತ ಸಮೂಹ

Ballari

ಕೂಡ್ಲಿಗಿ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ಎಡೆಬಿಡದೆ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಮೊದಲು ನಿರಂತರ ಸುರಿದ ಮಳೆಗೆ ಬಹುತೇಕ ಬೆಳೆಗಳು ಹಾಳಾಗಿವೆ.

ಶುಕ್ರವಾರವಷ್ಟೇ ಬಿಸಿಲು ಕಂಡಿದ್ದ ರೈತರು ಒಂದಿಷ್ಟು ಬೆಳೆಯಾದರೂ ಕೈಸೇರುವ ಭರವಸೆ ತುಂಬಿಕೊಂಡಿದ್ದರು. ಆದರೆ, ಮತ್ತೆ ಶುರುವಾದ ಜಿಟಿ ಜಿಟಿ ಮಳೆ ಆತಂಕ ಮೂಡಿಸಿದೆ. ಹೊಲಗಳಲ್ಲಿ ಹೈಬ್ರೀಡ್ ಜೋಳ, ಮೆಕ್ಕೆಜೋಳ, ಸಜ್ಜೆ ಕಟಾವು ಹಂತದಲ್ಲಿವೆ. ಆದರೆ, ಮಳೆಗೆ ಜಮೀನಿನಲ್ಲೇ ಜೋಳ ಕಪ್ಪಾಗುತ್ತಿದ್ದು, ರೈತರಿಗೆ ಸಂಕಷ್ಟದ ಆತಂಕ ಮೂಡಿಸಿದೆ. ಮಳೆಗೆ ತಾಲೂಕಿನ ವಿವಿಧೆಡೆ ಹಳೆಯ ಮನೆಗಳು ಬಿದ್ದಿದ್ದು, ಯಾವುದೇ ಅನಾಹುತಗಳಾಗಿಲ್ಲ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.