ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ರಸ್ತೆಯಲ್ಲಿ ಮಳೆಯಾಗುತ್ತಿರುವುದು. 
ಜಿಲ್ಲೆ

ಗುಡುಗು, ಮಿಂಚು ಸಹಿತ ಮಳೆ

ಅಭಿನಯ್ ಎಚ್.ಎಂ

ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಸೇರಿದಂತೆ ಅರಣ್ಯ ಪ್ರದೇಶದ ಸುತ್ತಮುತ್ತ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಮಳೆಯಾಗಿದೆ.

ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆ ಇದಾಗಿದ್ದು, ಅಲ್ಲಲ್ಲಿ ಇದ್ದ ಮೋಡ ಕವಿದ ವಾತಾವರಣ, ತಂಗಾಳಿ ಜನರಲ್ಲಿ ಸಂತಸ ಮೂಡಿಸಿತು.

ಹಲವು ದಿನಗಳಿಂದ 35ರಿಂದ 38 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲಿನ ತಾಪಮಾನ ಇತ್ತು. ಇದರಿಂದ ವನ್ಯಪ್ರಾಣಿ, ಪಕ್ಷಿಗಳು ಮತ್ತು ಜನರು ಹೈರಾಣಾಗಿದ್ದರು. ಅಲ್ಲದೆ ಮನೆ-ಕಚೇರಿಗಳಲ್ಲಿ ಹಗಲು-ರಾತ್ರಿ ಫ್ಯಾನ್, ಏರ್‌ಕೂಲರ್‌ಗಳ ಅವಲಂಬನೆ ಹೆಚ್ಚಿತ್ತು.

ಗುರುವಾರ ಮಧ್ಯಾಹ್ನ ವರುಣದೇವ ಇಳೆಗೆ ಇಳಿಯುತ್ತಿದ್ದಂತೆ ಅನೇಕರು ಮನೆಯಿಂದ ಹೊರಗೆ ಬಂದು ಮೊದಲ ಮಳೆಯನ್ನು ಕಣ್ಣುಂಬಿಕೊಂಡರು. ಕೆಲವರು ಮಳೆಯೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಮಾಡುತ್ತಿದ್ದ ದೃಶ್ಯ ಕಂಡು ಬಂತು.

ದಿಢೀರ್ ಮಳೆಯ ಸಿಂಚನ ಆಗುತ್ತಿದ್ದಂತೆ ಪಾದಚಾರಿಗಳು, ವಾಹನ ಸವಾರರು ಮರ, ಅಂಗಡಿ ಮುಂಗಟ್ಟುಗಳ ಬಳಿ ಆಶ್ರಯ ಪಡೆದರೆ, ಕೆಲವೆರು ಮಳೆಯಲ್ಲಿ ನೆನೆದ್ಕಖಿ. ತಾಲೂಕಿನ ಬಿಳಿಗಿರಿರಂಗನ ಬೆಟ್ಟ, ಯರಕನಗದ್ದ ಪೋಡು, ಪುರಾಣಿ ಪೋಡು, ಸೇರಿದಂತೆ ಸುತ್ತಮುತ್ತ ಗುಡುಗು, ಮಿಂಚು ಸಹಿತ ಮಳೆಯಾಗಿದೆ.