ಜಿಲ್ಲೆ

ಮಳೆ- ಗಾಳಿಗೆ ನೆಲಕ್ಕುರುಳಿದ ಅಡಕೆ ಮರಗಳು

ಯಲ್ಲಾಪುರ: ತಾಲೂಕಿನಲ್ಲಿ ಕಳೆದ 2-3 ದಿವಸಗಳಿಂದ ಮಳೆ ಚುರುಕುಗೊಂಡಿದ್ದು, ಭಾನುವಾರವೂ ಮಳೆ ಮುಂದುವರಿದಿದೆ.


ಬರಗಾಲದ ಛಾಯೆಯಿಂದ ಕಂಗಾಲಾಗಿದ್ದ ರೈತರ ಮುಖದಲ್ಲಿ ಮಳೆ ಮಂದಹಾಸ ಮೂಡಿಸಿದೆ. ಭಾನುವಾರ ಬೆಳಗ್ಗೆ ಜೋರಾದ ಮಳೆ- ಗಾಳಿಯ ಪರಿಣಾಮ ವಿವಿಧೆಡೆ ತೋಟಗಳಿಗೆ ಹಾನಿ ಉಂಟಾಗಿದೆ.

ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮಾವಿನಮನೆ ಗ್ರಾಪಂ ವ್ಯಾಪ್ತಿಯ ಬಾರೆ ಗ್ರಾಮದ ಅಡಕೆ ತೋಟಗಳಲ್ಲಿ ಅಡಕೆ ಮರಗಳು ಮುರಿದು ಬಿದ್ದು ಹಾನಿ ಉಂಟಾಗಿದೆ.