ಜಿಲ್ಲೆ

ರಾಜ್ಯದಲ್ಲಿ ನಡೆಯಲಿದೆ ಮಳೆ ನೀರು ಹಿಡಿದಿಡುವ ಅತಿದೊಡ್ಡ ಅಭಿಯಾನ

arunakunigal

ಬೆಂಗಳೂರು: ಮುಂದಿನ ಮಳೆಗಾಲ ಆರಂಭಕ್ಕೆ ಮುನ್ನವೇ ರಾಜ್ಯದ ಎಲ್ಲ ಕೆರೆ-ಕಟ್ಟೆಗಳನ್ನು ದುರಸ್ಥಿಗೊಳಿಸುವ, ಹೂಳೆತ್ತುವ ಕಾರ್ಯಕ್ಕಾಗಿ ಅಭಿಯಾನವೊಂದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತೆಗೆದುಕೊಳ್ಳುತ್ತಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಬಗ್ಗೆ ವಿವರಣೆ ನೀಡಿದ ಸಚಿವ ಕೆ ಎಸ್. ಈಶ್ವರಪ್ಪ, ಮಳೆ ನೀರು ಹಿಡಿದಿಡಲು ಆದ್ಯತೆ ನೀಡುವಂತೆ ಪ್ರಧಾನಿ‌ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಆ ಪ್ರಕಾರ ನರೇಗಾ ಬಳಸಿಕೊಂಡು ಜಲಶಕ್ತಿ ಅಭಿಯಾನ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು. ಇದನ್ನೂ ಓದಿರಿ ಪಿಡಬ್ಲ್ಯುಡಿ ಅಧಿಕಾರಿಯ ಆ ಒಂದು ತಪ್ಪಿಗೆ ಬಿಎಸ್ಸೆನ್ನೆಲ್​ ನಿವೃತ್ತ ಅಧಿಕಾರಿ ಸಾವು

ಏಪ್ರಿಲ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ‌ ಉದ್ಘಾಟನೆಯಾಗಲಿದ್ದು, ಅದೇ ದಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಸಣ್ಣ ನೀರಾವರಿ, ಜಲಸಂಪನ್ಮೂಲ, ಕಂದಾಯ, ಅರಣ್ಯ ಇಲಾಖೆಯನ್ನು ಬಳಸಿಕೊಳ್ಳುತ್ತೇವೆ ಎಂದರು.

ನೂರು ದಿನಗಳು ಅಭಿಯಾನ ನಡೆಸುವ ಉದ್ದೇಶವಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿಯಲ್ಲಿ 28 ಸಾವಿರ ಕೆರೆ ಇದೆ. ಜತೆಗೆ ಕಲ್ಯಾಣಿಗಳು, ಗೋಕಟ್ಟೆಯ ದುರಸ್ತಿಗೆ ಆದ್ಯತೆ ನೀಡಲಾಗುತ್ತದೆ. ನರೇಗಾ ಮಾಮವ ಸಂಪನ್ಮೂಲ ಬಳಸಲಾಗುತ್ತದೆ ಎಂದು ಹೇಳಿದರು.