ಜಿಲ್ಲೆ

ಕಡಬ ಹಳೆಸ್ಟೇಷನ್ ಕೆರೆಯ ನೀರಿನಿಂದ ರಸ್ತೆ ಮುಳುಗಡೆ ಮನೆಯಿಂದ ಹೊರ ಹೋಗಲು ಪರದಾಡುತ್ತಿರುವ ಕುಟುಂಬ - ಅಧಿಕಾರಿಗಳು ಇತ್ತ ಗಮನಹರಿಸುವರೇ?

Mangaluru - Nishantha Narayana

ಕಡಬ: ಕುಟ್ರುಪಾಡಿ ಗ್ರಾಮದ ವ್ಯಾಪ್ತಿಗೆ ಬರುವ ಕಡಬ ಹಳೇಸ್ಟೇಷನ್ ಕೆರೆಯಲ್ಲಿ ನೀರು ತುಂಬಿ ಸಮೀಪ ಇರುವ ಮನೆಯವರ ರಸ್ತೆ ಗೆ ನುಗ್ಗಿರುವುದರಿಂದ ಕುಟುಂಬ ಮನೆಯಿಂದ ಹೊರಹೋಗಲು ಕಷ್ಟ ಪಡುವಂತಾಗಿದೆ.


ಹಳೆಸ್ಟೇಷನ್ ನಿವಾಸಿ ಪೊಡಿಯ ಎಂಬವರ ಕುಟುಂಬ ಈ ಸಮಸ್ಯೆ ಗೆ ಸಿಳುಕಿದ್ದು ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕಾಗಿದೆ. ಹೆಚ್ಚಿನ ಮಳೆಯಾದಾಗ ಮನೆಗೆ ನೀರು ನುಗ್ಗುವ ಸಂಭವವೂ ಇದೆ. ಈ ಮನೆಯಿಂದ ದಿನನಿತ್ಯ ಸಣ್ಣ ಮಕ್ಕಳು ಶಾಲೆಗೆ ಹೋಗುತ್ತಿದ್ದು, ಮಕ್ಕಳ ತಾಯಿಯೂ ಅಪಾಯಕಾರಿ ರೀತಿಯಲ್ಲಿ ನೀರಿನಲ್ಲಿ ಕೊಂಡೊಯ್ಯುತ್ತಿರುವುದು ಕಂಡು ಬಂದಿದೆ. ಸ್ವಲ್ಪ ಹೆಚ್ಚು ಕಮ್ಮಿ ಆದರೂ ದೊಡ್ಡ ತೊಂದರೆ ಆಗಲಿದೆ. ಈ ಕೆರೆಯಿಂದ ಮೋರಿ ಹಾಕಿ ನೀರನ್ನು ಹೊರಗಡೆ ಬಿಡಲಾಗುತ್ತಿದ್ದರೂ ಸರಗಾವಾಗಿ ನೀರು ಹೋಗದೆ ಇರುವುದರಿಂದ ದೊಡ್ಡ ಮಟ್ಟದ ನೀರು ಸಂಗ್ರಾಹವಾಗಿದೆ.

ಜು.5 ರಂದು ಕಡಬ ಸಮುದಾಯ ಕೇಂದ್ರದ ಆರೋಗ್ಯ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆ ಮನೆ ಭೇಟಿ ಗೆ ಹೋಗುವ ಸಂಧರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಅವರಿಗೆ ಆ ಮನೆಯನ್ನು ಸಂಪರ್ಕ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.