1) ಹೇರೂರು ಪ್ರಾಥಮಿಕ ಶಾಲೆ ಕಟ್ಟಡದಲ್ಲಿ ನೀರು ಹೊಕ್ಕಿದ್ದರಿಂದ ಗ್ರಾಮದ ಸಮುದಾಯ ಭವನದಲ್ಲಿ ಮಕ್ಕಳಿಗೆ ವರ್ಗದ ವ್ಯವಸ್ಥೆ ಮಾಡಿ ಬೋಧನೆ ಮಾಡುತ್ತಿರುವ ಶಿಕ್ಷಕರು. 2) ಹೇರೂರ ಶಾಲೆ ಕಟ್ಟಡದಲ್ಲಿ ನಿಂತಿರುವ ನೀರು ಹಾಗೂ ಮೇಲ್ಛಾವಣಿ ಕುಸಿದು ಬಿದ್ದಿರುವುದು. 
ಜಿಲ್ಲೆ

ಹೇರೂರ ಶಾಲೆಗೆ ಹೊಕ್ಕ ಮಳೆ ನೀರು

Bagalkot

ಳಕಲ್ಲ(ಗ್ರಾ): ತಾಲೂಕಿನ ಹೇರೂರ ಪ್ರಾಥಮಿಕ ಶಾಲೆ ಮೇಲ್ಛಾವಣಿ ಮಳೆಗೆ ಕುಸಿದ್ದು ಬಿದ್ದು ಮಕ್ಕಳ ಕಲಿಕೆಗೆ ತೊಂದರೆಯಾಗಿದೆ.

ಒಂದನೇ ತರಗತಿಯಿಂದ 8 ನೇ ತರಗತಿವರೆಗೆ ಒಟ್ಟು 80 ಮಕ್ಕಳು ಏಳು ಕೊಠಡಿಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಗ್ರಾಮದ ಜನಜೀವನ ಅಸ್ತವ್ಯಸ್ತವಾಗಿದೆ. ಮಕ್ಕಳು ಶಾಲೆಗೆ ಹೋಗಲು ಹರಸಾಹಸ ಪಡಬೇಕಾಗಿದೆ. ಶಾಲೆ ಕೊಠಡಿಗಳಲ್ಲಿ ನೀರು ನಿಂತಿದ್ದರಿಂದ ಕಲಿಕೆಗೆ ಸಮಸ್ಯೆ ಉಂಟಾಗಿದೆ.

ಗ್ರಾಮದ ಸಮುದಾಯ ಭವನದಲ್ಲಿ ಶಿಕ್ಷಕರು ಮಂಗಳವಾರ ವರ್ಗಗಳನ್ನು ನಡೆಸುವ ಪ್ರಯತ್ನವನ್ನು ಶಿಕ್ಷಕರು ಮಾಡಿದರು. ಗ್ರಾಮದಲ್ಲಿ ಮಳೆ ಬಂದರೆ ಶಾಲೆಗೆ ರಜೆ ಕೊಡುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥ ದೇವನಾಳ ಹೇಳಿದರು.