ವಿಟ್ಲ: ಕಡೂರು ಕಾಂಞಂಗಾಡು ಹೆದ್ದಾರಿ ವೀರಕಂಬ ಸಮೀಪದ ಪಾತ್ರತೋಟ ಎಂಬಲ್ಲಿ ಗುಡ್ಡೆ ಕುಸಿತವಾಗಿದ್ದು, ವಿಟ್ಲ ಮಂಗಳೂರು ಸಂಪರ್ಕ ರಸ್ತೆ ಬಂದ್ ಆಗಿದೆ.
ಗುಡ್ಡ ಕುಸಿತದಿಂದ ವಿದ್ಯುತ್ ಕಂಬ ಸಹಿತ ತಂತಿಗಳು ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬಂಡೆಕಲ್ಲೊಂದು ರಸ್ತೆ ಕಡೆಗೆ ಬಾಗಿ ನಿಂತು ಅಪಾಯ ಆಹ್ವಾನಿಸುತ್ತಿದೆ.
ತೆರವು ಕಾರ್ಯ ನಡೆಯುವವರೆಗೆ ಕಲ್ಲಡ್ಕ ವಿಟ್ಲ ನಡುವೆ ಸಂಪರ್ಕ ಸಮಸ್ಯೆಯಾಗಲಿದೆ.