ಜಿಲ್ಲೆ

ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ

reportermys


ಮಡಿಕೇರಿ: ಬುಧವಾರ ಜಿಲ್ಲೆಯ ಎಲ್ಲೆಡೆ ಬಿಸಿಲಿನ ವಾತಾವರಣ ಕಂಡುಬಂದಿತ್ತು.


ಕೊಡಗು ಜಿಲ್ಲೆಯಲ್ಲಿ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೩.೬೯ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೨೫.೫೦ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ೧೮೨೬.೯೨ ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ೧೩೨೧ ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೬.೨೫ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೪.೫೩ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೦.೩೦ ಮಿ.ಮೀ. ಮಳೆಯಾಗಿದೆ.


ಮಡಿಕೇರಿ ಕಸಬಾ ೧.೨೦, ನಾಪೋಕ್ಲು ೨, ಸಂಪಾಜೆ ೧೩, ಭಾಗಮಂಡಲ ೮.೮೦, ವಿರಾಜಪೇಟೆ ಕಸಬಾ ೧೯.೨೦, ಅಮ್ಮತಿ ೮, ಸೋಮವಾರಪೇಟೆ ಕಸಬಾ ೦.೮೦, ಶಾಂತಳ್ಳಿ ೧ ಮಿ.ಮೀ. ಮಳೆಯಾಗಿದೆ.


ಹಾರಂಗಿ: ೨,೮೫೯ ಅಡಿ ಸಾಮರ್ಥ್ಯವಿರುವ ಹಾರಂಗಿ ಜಲಾಶಯದಲ್ಲಿ ಬುಧವಾರ ೨೮೫೫.೧೨ ಅಡಿ ನೀರು ಸಂಗ್ರಹವಾಗಿದೆ. ಒಳಹರಿವು ೬,೧೧೧ ಕ್ಯೂಸೆಕ್ ಇದ್ದು, ಹೊರ ಹರಿವು ನದಿಗೆ ೪೫೦೦ ಕ್ಯೂಸೆಕ್, ನಾಲೆಗೆ ೨೦ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.