ಜಿಲ್ಲೆ

ಭಾರಿ ಮಳೆ ಕೊಟ್ಟಿಗೆಯ ಮೇಲೆ ಬಿದ್ದ ಮರ

Uttara Kannada - Subash Hegde

ಕಾರವಾರ/ಶಿರಸಿ: ಜಿಲ್ಲೆಯಲ್ಲಿ ಮಳೆ ಕೊಂಚ ಇಳಿಮುಖವಾಗಿದೆ. ಜೂನ್ ೨೭ ರಂದು ಮಳೆ ಉತ್ತಮವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೇಂಜ್ ಅರ‍್ಟ್ ಘೋಷಿಸಲಾಗಿದೆ. ಜೂನ್ ೨೮ ರಂದು ಯೆಲ್ಲೋ ಅರ‍್ಟ್ ಘೋಷಿಸಲಾಗಿದೆ.

ಗುರುವಾರದ ವರದಿಯಂತೆ ಹಿಂದಿನ ೨೪ ಗಂಟೆಗಳ ಅವಽಯಲ್ಲಿ -೪೨.೪ ಮಿಮೀ, ಭಟ್ಕಳ-೧೩.೬, ಹಳಿಯಾಳ-೧೫.೯,ಹೊನ್ನಾವರ- ೨೯.೪, ಕಾರವಾರ- ೪೦.೧, ಕುಮಟಾ- ೨೭, ಮುಂಡಗೋಡ-೨೫.೪, ಸಿದ್ದಾಪುರ -೬೮, ಶಿರಸಿ- ೫೮.೯, ಜೊಯಿಡಾ-೨೮.೧, ಯಲ್ಲಾಪುರ-೩೫.೨, ದಾಂಡೇಲಿಯಲ್ಲಿ -೨೦.೮ ಮೀಮೀ ಮಳೆಯಾಗಿದೆ. ೧ ಮನೆಗೆ ಸಂಪರ‍್ಣ ಹಾನಿಯಾಗಿದೆ.

ಹಾನಿ: ಭಾರಿ ಗಾಳಿ ಮಳೆಯಿಂದ ಶಿರಸಿ ಕಾನಳ್ಳಿ ಗ್ರಾಮದ ನಾಗಾ ಸೋಮಾ ದೇವಾಡಿಗ ಅವರಿಗೆ ಸೇರಿದ ಕೊಟ್ಟಿಗೆಯ ಮೇಲೆ ಮಾವಿನ ಮರ ಬಿದ್ದು ಹಾನಿಯಾಗಿದೆ. ಗುಡ್ನಾಪೂರ ಗ್ರಾಮದ ಸುಭದ್ರಾ ನಾಯ್ಕ್ ಎಂಬುವವರ ದನದ ಕೊಟ್ಟಿಗೆ ಸಂಪರ‍್ಣವಾಗಿ ಕುಸಿದು ಬಿದ್ದು ಹಾನಿಯಾಗಿದೆ. ಒಂದು ಆಕಳು ಹಾಗೂ ೨ ಕರುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭಾಶಿ ಗ್ರಾಮದ ನೀಲಾವತಿ ಗಜಾನನ ನಾಯ್ಕ್ ಎಂಬುವವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ.