ಜಿಲ್ಲೆ

ಮಳೆಯಿಂದ ಕದ್ರಾದಲ್ಲಿ ಮನೆಗಳ ಮೇಲೆ ಮರ ಬಿದ್ದು ಹಾನಿ

Uttara Kannada - Subash Hegde

ಕಾರವಾರ:ಬುಧವಾರ ಸುರಿದ ಭಾರಿ ಗಾಳಿ ಮಳೆಗೆ ಕದ್ರಾ ಭಾಗದಲ್ಲಿ ಭಾರಿ ಅನಾಹುತಗಳು ಸಂಭವಿಸಿವೆ. ಕದ್ರಾ ತಮಿಳು ಕ್ಯಾಂಪ್‌ನಲ್ಲಿ 3 ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ.

ರಾತ್ರಿ ಭಾರಿ ಗಾಳಿಯೊಂದಿಗೆ ಮಳೆ ಸುರಿದಿದ್ದರಿಂದ ಮರಗಳು ಉರುಳಿ ಬಿದ್ದವು. ಮನೆಯೊಳಗಿದ್ದ ಜನ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡರು. ಅರಣ್ಯಾಽಕಾರಿಗಳು ಬಂದು ಪರಿಶೀಲಿಸಿದ್ದು, ಮರ ತೆರವು ಮಾಡಲು ಸಹಕಾರ ನೀಡಿದ್ದಾರೆ. ರಾಜೀವ ನಗರದ ಅಂಗನವಾಡಿ ಮೇಲ್ಛಾವಣಿ ಹಾರಿ ಹೋಗಿದೆ. ಕಂದಾಯ ಅಽಕಾರಿಗಳು ಸ್ಥಳ ಪರಿಶೀಲನೆ ಡನೆಸಿದ್ದಾರೆ.