ಜಿಲ್ಲೆ

ಆವರಣಗೋಡೆ ಕುಸಿದು ೩ ಆಟೋಗಳಿಗೆ ಹಾನಿ

Mangaluru - Nishantha Narayana

ಪುತ್ತೂರು: ಗ್ರಾಮಚಾವಡಿಯ ಸಮೀಪದಲ್ಲಿ ನಗರಸಭೆಯ ಆವರಣಗೋಡೆ ಕುಸಿದು ಬಿದ್ದು ಮೂರು ಆಟೋಗಳಿಗೆ ಹಾನಿಯಾಗಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನಗರಸಭೆಯ ನೀರಿಂಗಿಸುವ ತೊಟ್ಟಿ ಸಮೀಪದಲ್ಲೇ ಏಕಾಏಕಿ ಗೋಡೆ ಕುಸಿತವಾಗಿದೆ. ಕಲ್ಲು, ಮಣ್ಣು ಹಾಗೂ ಆವರಣಗೋಡೆಯಲ್ಲಿದ್ದ ಕಬ್ಬಿಣದ ಸಲಾಕೆ ಆಟೋ ಪಾರ್ಕಿಂಗ್‌ನಲ್ಲಿದ್ದ ಆಟೋಗಳ ಮೇಲೆ ಬಿದ್ದಿದೆ. ಗೋಡೆಗೆ ತಾಗಿಕೊಂಡು ವಿದ್ಯುತ್ ಪರಿವರ್ತಕ ಅಳವಡಿಸಿದ್ದು, ಕುಸಿತದ ರಭಸಕ್ಕೆ ಕಂಬಗಳು ರಸ್ತೆಗೆ ವಾಲಿವೆ. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕಾಗಮಿಸಿ ದುರಸ್ತಿಗೊಳಿಸಿ ಅಪಾಯ ತಪ್ಪಿಸಿದ್ದಾರೆ. ರಸ್ತೆಗೆ ನುಗ್ಗಿದ್ದ ಕಲ್ಲು ಮಣ್ಣನ್ನು ತೆರವು ಮಾಡಲಾಗಿದೆ.