ನಾಪೋಕ್ಲು: ಕೊಡಗಿನ ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿರುವ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥಿಸಿ ಏ. 8ರಂದು ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಲಿದೆ. ಅಂದು ಮುಂಜಾನೆ 5.45 ರಿಂದ 6.45 ರವರೆಗೆ ರುದ್ರಾಭಿಷೇಕ ಪೂಜೆ ಹಾಗೂ ನೂರಾಒಂದು ಎಲೆ ನೀರು, ಹಾಲು ,ತುಪ್ಪ ಅಭಿಷೇಕ ನಡೆಯಲಿದೆ. ಈ ಸಂದರ್ಭ ಕೊಡಗಿನ ನೂರಾರು ಭಕ್ತರು ವರುಣನ ಕೃಪೆಗಾಗಿ ಸಲ್ಲಿಸಲಾಗುವ ವಿಶೇಷ ಸಮೂಹ ಪ್ರಾರ್ಥನೆಗೆ ಇಗ್ಗುತಪ್ಪ ದೇವಾಲಯ ಸಮಿತಿ ಸಕಲ ವ್ಯವಸ್ಥೆ ಮಾಡಿದೆ.