ಮಸ್ಕಿ ತಾಲೂಕಿನ ಮೆದಕಿನಾಳ ಗ್ರಾಮದಲ್ಲಿ ಆಲಿಕಲ್ಲು ಮಳೆಯಿಂದ ಬುಧವಾರ ಪಪ್ಪಾಯಿ ಬೆಳೆ ಹಾಳಾಗಿರುವುದು. 
ಜಿಲ್ಲೆ

ಮೆದಕಿನಾಳದಲ್ಲಿ ಆಲಿಕಲ್ಲು ಸುರಿಮಳೆ

ಪ್ರವೀಣ ಉದುಸಾ ದಲಬಂಜನ್

ಮಸ್ಕಿ: ಪಟ್ಟಣದಲ್ಲಿ ಗುರುವಾರ ರಾತ್ರಿ ಸುರಿದ ಗುಡುಗು-ಸಿಡಿಲು ಸಹಿತ ಭಾರಿ ಮಳೆ ಸುರಿದಿದೆ. ಮೆದಕಿನಾಳ ಗ್ರಾಮದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.


ಬೇಸಿಗೆಯ ಝಳ ಆರಂಭದೊಂದಿಗೇ ಮಳೆಯ ಸಿಂಚನ ತಂಪೆರದಿದೆ. ಸಾಮಾನ್ಯವಾಗಿ ಯುಗಾದಿ ನಂತರ ಮಳೆ ಬರುತ್ತಿತ್ತು. ಈ ವರ್ಷ ಯುಗಾದಿಗೂ ಮುಂಚಿತವಾಗಿ ಮಳೆ ಬಂದಿರುವುದರಿಂದ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರುತ್ತದೆ ಏನೋ ಎಂದು ರೈತರು ಕಳವಳಗೊಂಡಿದ್ದಾರೆ. ಮೆದಕಿನಾಳದಲ್ಲಿ ಆಲಿಕಲ್ಲು ಮಳೆಯಿಂದ ಪಪ್ಪಾಯಿ ಫಸಲು ಹಾಳಾಗಿದೆ. ಮದುವೆ ಸಮಾರಂಭಕ್ಕೆ ಹಾಕಿದ್ದ ಶಾಮಿಯಾನ ಹಾಳಾಗಿದೆ ಎಂದು ತಿಳಿದುಬಂದಿದೆ. ಮಕ್ಕಳು ಆಲಿಕಲ್ಲನ್ನು ಹಿಡಿದು ಸಂಭ್ರಮಿಸಿದರು.
ತಂಪೆರೆದ ವರುಣ


ಗೊರೇಬಾಳ: ಗ್ರಾಮದಲ್ಲಿ ಗುರುವಾರ ತುಂತುರು ಮ ಬಂದಿದ್ದು ಜನರಲ್ಲಿ ಸಂತಸ ಮೂಡಿಸಿತು. ಮಳೆಯಿಂದ ಬೆಳೆಗಳಿಗೆ ಯಾವುದೇ ತೊಂದರೆ ಆಗಿಲ್ಲ. ಶುಕ್ರವಾರ ಮೋಡ ಮುಸುಕಿದ ವಾತಾವರಣ ಇತ್ತು.